ಗಣೇಶ್ ಆಚಾರ್ಯ ಅಶ್ಲೀಲ ಚಿತ್ರ ನೋಡಲು ಒತ್ತಾಯಿಸಿದ್ದರು: ಮಹಿಳಾ ಕೊರಿಯೊಗ್ರಾಫರ್ ಆರೋಪ

Update: 2020-01-28 16:15 GMT

ಹೊಸದಿಲ್ಲಿ, ಜ. 28: ಕೊರಿಯೊಗ್ರಾಫರ್ ಗಣೇಶ್ ಆಚಾರ್ಯ ಅಶ್ಲೀಲ ವೀಡಿಯೊವನ್ನು ಬಲವಂತವಾಗಿ ತೋರಿಸಿರುವುದಾಗಿ ಹಾಗೂ ಕೆಲಸ ನಿರ್ವಹಿಸಲು ನಿರಾಕರಿಸಿರುವುದಾಗಿ ಮಹಿಳಾ ಕೊರಿಯೋಗ್ರಾಫರ್ ಓರ್ವರು ಆರೋಪಿಸಿದ್ದಾರೆ.

ಗಣೇಶ್ ಆಚಾರ್ಯ ಅವರ ವಿರುದ್ಧ ಮಹಾರಾಷ್ಟ್ರದಲ್ಲಿರುವ ಮಹಿಳಾ ಆಯೋಗ ಹಾಗೂ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ. ತನ್ನ ಆದಾಯದಲ್ಲಿ ಕಮಿಷನ್ ನೀಡುವಂತೆ ಹಾಗೂ ಅಶ್ಲೀಲ ಚಿತ್ರ ವೀಕ್ಷಿಸುವಂತೆ ಕೂಡ ಗಣೇಶ್ ಆಚಾರ್ಯ ಬಲವಂತಪಡಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಆಚಾರ್ಯ ಅವರ ಷರತ್ತುಗಳಿಗೆ ಒಪ್ಪದೇ ಇದ್ದಾಗೆ ದ್ವೇಷ ಸಾಧಿಸಲು ಪ್ರಯತ್ನಿಸಿದರು ಹಾಗೂ ಐಎಫ್‌ಟಿಸಿಎಯ ಸದಸ್ಯತ್ವ ರದ್ದುಗೊಳಿಸಿದ್ದಾರೆ. ಅಲ್ಲದೆ, ಅವರೊಂದಿಗೆ ಕೆಲಸ ನಿರ್ವಹಿಸದಂತೆ ಇತರ ಕೊರಿಯೊಗ್ರಾಫರ್‌ಗಳಿಗೆ ನೋಟಿಸು ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News