ಗರ್ಭಪಾತದ ಗರಿಷ್ಠ ಕಾಲ ಮಿತಿ 24 ವಾರಗಳಿಗೆ ವಿಸ್ತರಣೆ: ಸಂಪುಟ ಅನುಮೋದನೆ

Update: 2020-01-29 17:58 GMT

ಹೊಸದಿಲ್ಲಿ, ಜ. 29: ಗರ್ಭಪಾತಕ್ಕೆ ಅನುಮತಿ ನೀಡುವ ಗರಿಷ್ಠ ಕಾಲ ಮಿತಿಯನ್ನು ಈಗಿರುವ 20 ವಾರಗಳಿಂದ 24 ವಾರಗಳಿಗೆ ವಿಸ್ತರಿಸುವುದಕ್ಕೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಸಂಪುಟ ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಗರ್ಭಪಾತಕ್ಕೆ ಅನುಮತಿ ನೀಡುವ ಗರಿಷ್ಠ ಕಾಲ ಮಿತಿಯನ್ನು ಈಗಿರುವ 20 ವಾರಗಳಿಂದ 24 ವಾರಗಳಿಗೆ ವಿಸ್ತರಿಸಲಾಗಿದೆ ಎಂದರು. ಇದು ಸುರಕ್ಷಿತ ಗರ್ಭಪಾತದ ಭರವಸೆ ಒದಗಿಸಲಿದೆ. ಅಲ್ಲದೆ, ತಮ್ಮ ದೇಹದ ಮೇಲಿನ ಪ್ರತ್ಯುತ್ಪಾದನಾ ಹಕ್ಕನ್ನು ನೀಡಲಿದೆ ಎಂದರು. ತಾವು ಗರ್ಭಿಣಿ ಎಂದು ಅರಿವಾಗದ ಅತ್ಯಾಚಾರ ಸಂತ್ರಸ್ತೆ, ಅಂಗವಿಕಲ ಬಾಲಕಿ ಹಾಗೂ ಅಪ್ರಾಪ್ತರಿಗೆ ಈ ಗರಿಷ್ಠ ಸಮಯ ಮಿತಿ ವಿಸ್ತರಿಸುವುದು ನೆರವಾಗಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News