×
Ad

ಬಜೆಟ್: ರೈಲ್ವೆಯಲ್ಲಿ ಖಾಸಗಿಯವರಿಗೆ ಕೆಂಪು ಹಾಸು

Update: 2020-02-01 20:24 IST

 ಹೊಸದಿಲ್ಲಿ,ಫೆ.1: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಲೋಕಸಭೆಯಲ್ಲಿ ಮಂಡಿಸಿದ 2020-21ನೇ ಸಾಲಿನ ಕೇಂದ್ರ ಬಜೆಟ್ ಭಾಷಣದಲ್ಲಿ ರೈಲ್ವೆಗೆ ಸಂಬಂಧಿಸಿದ ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ.

 ಪಿಯೂಶ್ ಗೋಯೆಲ್ ನೇತೃತ್ವದ ರೈಲ್ವೆ ಸಚಿವಾಲಯವು ರೈಲ್ವೆ ಸುರಕ್ಷತೆ ಬಗ್ಗೆ ನಿರಂತರವಾಗಿ ಅದ್ಯತೆಯನ್ನು ನೀಡುತ್ತಿದ್ದು ಇದರ ಪರಿಣಾಮವಾಗಿ ಇತ್ತೀಚಿನ ವರ್ಷಗಳಲ್ಲಿ ರೈಲ್ವೆ ಅವಘಡಗಳಲ್ಲಿ ಗಣನೀಯವಾದ ಇಳಿಕೆ ಕಂಡುಬಂದಿರುವುದರ ಬಗ್ಗೆ ನಿರ್ಮಲಾ ಸೀತಾರಾಮನ್ ತನ್ನ ಬಜೆಟ್ ಭಾಷಣದಲ್ಲಿ ಗಮನಸೆಳೆದಿದ್ದಾರೆ.

ಮುಂಬರುವ ವರ್ಷಗಳಲ್ಲಿ ತೇಜಸ್ ಎಕ್ಸ್‌ಪ್ರೆಸ್ ಮಾದರಿಯ ಇನ್ನೂ ಹಲವು ರೈಲುಗಳನ್ನು ಆರಂಭಿಸಲಾಗುವುದೆಂದು ಅವರು ರೈಲ್ವೆ ಬಜೆಟ್ ಭಾಷಣದಲ್ಲಿ ಘೋಷಿಸಿದರು. ತೇಜಸ್ ಮಾದರಿಯ ಅತ್ಯಾಧುನಿಕ ರೈಲುಗಳು ದೇಶಾದ್ಯಂತ ಪ್ರಮುಖ ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲಿವೆ. ಸರಕಾರ-ಖಾಸಗಿ ಪಾಲುದಾರಿಕೆಯಲ್ಲಿ 150 ರೈಲುಗಳನ್ನು ಓಡಿಸಲಾಗುವುದು ಹಾಗೂ ಖಾಸಗಿ ರಂಗದ ನೆರವಿನೊಂದಿಗೆ 4 ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದೆಂದು ಸೀತಾರಾಮನ್ ಘೋಷಿಸಿದರು

   ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಕಿಸಾನ್ ರೈಲನ್ನು ಕೂಡಾ ಪ್ರಾರಂಭಿಸಲಾಗುವುದೆಂದು ಸೀತಾರಾಮನ್ ಬಜೆಟ್‌ ಭಾಷಣದಲ್ಲಿ ಘೋಷಿಸಿದರು. ಶಿಥಲೀಕೃತ ಕೋಚ್‌ಗನ್ನು ಹೊಂದಿರುವ ಕಿಸಾನ್ ರೈಲುಗಳು  ಮೂಲಕ ಹಾಲು, ಮಾಂಸ, ಹಾಗೂ ಮೀನು ಮುಂತಾದ ಉತ್ಪನ್ನಗಳು ಕೆಡದಂತೆ ಸುರಕ್ಷಿತವಾಗಿ ಸಾಗಾಟ ಮಾಡಲು ರೈತರಿಗೆ ನೆರವಾಗಲಿವೆ. ಎಕ್ಸ್‌ಪ್ರೆಸ್ ಹಾಗೂ ಸರಕು ಸಾಗಣೆ ರೈಲುಗಳಲ್ಲಿಯೂ ರೈತರಿಗಾಗಿ ಶೀಥಲೀಕರಣದ ಕೋಚ್‌ಗಳನ್ನು ಅಳವಡಿಸಲಾಗುವುದೆಂದು ಅವರು ತಿಳಿಸಿದರು.

ಮುಂದಿನ ಕೆಲವೇ ವರ್ಷಗಳಲ್ಲಿ ಸುಮಾರು 150 ಖಾಸಗಿ ಒಡೆತನದ ರೈಲುಗಳು ಭಾರತೀಯ ರೈಲ್ವೆ ಜಾಲದಲ್ಲಿ ಓಡಾಡಲಿರುವುದಾಗಿ ಅವರು ಹೇಳಿದರು.

 ಅಹ್ಮದಾಬಾದ್-ಮುಂಬೈ ನಡುವೆ ನಿರ್ಮಿಸಲಾಗುತ್ತಿರುವ ಭಾರತದ ಚೊಚ್ಚಲ ಬುಲೆಟ್ ರೈಲು ಮಾರ್ಗದ ಕಾಮಗಾರಿಯು ನಿಗದಿತ ಸಮಯದಲ್ಲಿ ಪೂರ್ತಿಯಾಗಲಿದೆಯೆಂದು ನಿರ್ಮಲಾ ಭರವಸೆ ನೀಡಿದರು.

 2020-21ರ ಸಾಲಿನ ಬಜೆಟ್‌ನಲ್ಲಿ ರೈಲ್ವೆಗೆ ಒಟ್ಟು 2,25,913 ಕೋಟಿ ರೂ. ಅನುದಾನವನ್ನು ಘೋಷಿಸಲಾಗಿದ್ದು, ಇದು ಕಳೆದ ಸಾಲಿಗಿಂತ ಅಧಿಕವಾಗದೆ. 2020-21ರ ಬಜೆಟ್‌ನಲ್ಲಿ ರೈಲ್ವೆಗೆ 2,16,675 ಕೋಟಿ ರೂ. ಅನುದಾನವನ್ನು ನೀಡಲಾಗಿತ್ತು.

 2020-21ನೇ ರೈಲ್ವೆ ಬಜೆಟ್ ಹೈಲೈಟ್ಸ್

1. ಮುಂಬೈ- ಅಹ್ಮದಾಬಾದ್ ನಡುವೆ ಹೈಸ್ಪೀಡ್ ರೈಲುಗಳ ಸೇವೆ ಆರಂಭಿಸಲಾಗುವುದು.

2. ರೈಲ್ವೆ ಹಳಿಗಳ ಸಮೀಪವೇ ಸೌರವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನೆ

5. 550 ರೈಲು ನಿಲ್ದಾಣಗಳಲ್ಲಿ 550 ವೈ-ಫೈ ಸೌಲಭ್ಯ

6. ದೇಶಾದ್ಯಂತ 27 ಸಾವಿರ ಕಿ.ಮೀ. ರೈಲ್ವೆ ಹಳಿ ವಿದ್ಯುದೀಕರಣ

► ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ ಅಸ್ತು

148 ಕಿ.ಮೀ. ವಿಸ್ತೀರ್ಣದ ಯೋಜನೆ; ಖಾಸಗಿ ಸಹಭಾಗಿತ್ವ

    ನಿರ್ಮಲಾ ಸೀತಾರಾಮನ್ ತನ್ನ ಬಜೆಟ್ ಭಾಷಣದಲ್ಲಿ ಪ್ರಕಟಿಸಿದ ರೈಲ್ವೆ ಯೋಜನೆಯಲ್ಲಿ 148 ಕಿ.ಮೀ. ವಿಸ್ತೀರ್ಣದ ಬೆಂಗಳೂರು ಸಬರ್ಬನ್ ರೈಲು ಸಾರಿಗೆ ಯೋಜನೆ ಕೂಡಾ ಸೇರಿದೆ. 18600 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯೊಂದಿಗೆ ನಿರ್ಮಿಸಲಾಗುವು ಬೆಂಗಳೂರು ಸಬರ್ಬನ್ ರೈಲು ಯೋಜನೆಗಾಗಿ ಸರಕಾರವು 290 ಶೇಕಡ ಇಕ್ವಿಟಿ ಶೇರುಗಳನ್ನು ಒದಗಿಸಲಿದ್ದು, ಖಾಸಗಿಯಿಂದ ಶೇ.60ರಷ್ಟು ಹೂಡಿಕೆಯನ್ನು ಆಹ್ವಾನಿಸಲಾಗುವುದು ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News