×
Ad

ಕೇಂದ್ರ ಬಜೆಟ್ ನಿಂದ ಯಾರಿಗೆ ಲಾಭ? ಯಾರಿಗೆ ನಷ್ಟ?

Update: 2020-02-01 20:31 IST

  ಹೊಸದಿಲ್ಲಿ, ಜ.2: ವಿಶ್ವದ ಅತಿ ವೇಗವಾಗಿ ಬೆಳೆಯುವ ಆರ್ಥಿಕತೆಯ ದೇಶವೆಂಬ ಹೆಗ್ಗಳಿಕೆಯನ್ನು ಹೊಂದಿದ್ದ ಭಾರತವು ಈಗ 11 ವರ್ಷಗಳಲ್ಲಿ ಅತ್ಯಂತ ಕೆಳಮಟ್ಟಕ್ಕೆ ಕುಸಿದಿರುವ ಆರ್ಥಿಕತೆಯನ್ನು ಹಳಿಗೆ ತರಲು ಹರಸಾಹಸಪಡುವಂತಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಮಂಡಿಸಿದ ಬಜೆನಲ್ಲಿ ಶ್ರೀಸಾಮಾನ್ಯರ ಆದಾಯವನ್ನು ಉತ್ತೇಜಿಸುವ ಹಾಗೂ ಅವರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿವೆ ಎಂದು ತಿಳಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಬಜೆಟ್‌ನಲ್ಲಿ ಯಾವ್ಯಾವ ವಲಯಗಳು ಬಂಪರ್ ಲಾಭವಾಗಿದೆ, ಯಾವ್ಯಾವ ವಲಯಗಳು ಮಂಕಾಗಿವೆ ಎಂಬುದರ ಸ್ಥೂಲ ನೋಟ ಇಲ್ಲಿದೆ.

ಲಾಭ ಪಡೆಯಲಿರುವ ವಲಯಗಳು

 ಸಾರಿಗೆ ಮೂಲ ಸೌಕರ್ಯ

   ಹೆದ್ದಾರಿ ಹಾಗೂ ರೈಲ್ವೆಗಳಿಗೆ ಹಲವಾರು ಬೃಹತ್ ಯೋಜನೆಗಳನ್ನು ಪ್ರಕಟಿಸಿರುವ ನಿರ್ಮಲಾ ಸೀತಾರಾಮನ್, ಸಾರಿಗೆ ಮೂಲಕ ಸೌಕರ್ಯಕ್ಕೆ 1.700 ಟ್ರಿಲಿಯನ್ ಕೋಟಿ ರೂಗಳ ಅನುದಾನ ಘೋಷಿಸಿದ್ದಾರೆ. ಹೆದ್ದಾರಿಗಳ ಅಭಿವೃದ್ಧಿಯನ್ನು ಚುರುಕುಗೊಳಿಸುವುದಾಗಿಯೂ ಅವರು ಪ್ರಕಟಿಸಿದ್ದಾರೆ. ಲಾರ್ಸೆನ್ ಟುಬ್ರೊ ಹಾಗೂ ಕೆಎನ್‌ರ್ ಕನ್ಸ್‌ಟ್ರಕ್ಷನ್ಸ್ ್ರ ಮತ್ತಿತರ ಬೃಹತ್ ನಿರ್ಮಾಣ ಕಂಪೆನಿಗಳು ಈ ಯೋಜನೆಗಳಇಂದ ಪ್ರಯೋಜನ ಪಡೆಯಲಿವೆ.

 ಇಲೆಕ್ಟ್ರಾನಿಕ್ ಉತ್ಪಾದನಾ ವಲಯ

   ಮೊಬೈಲ್ ಫೋನ್‌ಗಳು, ಇಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಸೆಮಿಕಂಡಕ್ಟರ್ ಅಲ್ಲದೆ ವೈದ್ಯಕೀಯ ಉಪಕರಣಗಳ ಉತ್ಪಾದನೆಯನ್ನು ಉತ್ತೇಚಿಸುವ ಸರಕಾರದ ಯೋಜನೆಯಿಂದಾಗಿ ಡಿಕ್ಸನ್ ಟೆಕ್ನಾಲಜೀಸ್, ಆ್ಯಂಬರ್ ಎಂಟರ್‌ಪ್ರೈಸಸ್, ಸುಬ್ರೊಸ್‌ನಂತಹ ಇಲೆಕ್ಟ್ರಾನಿಕ್ ಕೈಗಾರಿಕಾ ಕಂಪೆನಿಗಳಿಗೆ ಅನುಕೂಲಕರವಾಗಲಿದೆ.

ಗ್ರಾಮೀಣ ಭಾರತ

  ಕೃಷಿ ಹಾಗೂ ಗ್ರಾಮೀಣ ವಲಯಗಳಿಗೆ 2.83 ಟ್ರಿಲಿಯನ್ ರೂಪಾಯಿಗಳನ್ನು ಅನುದಾನ ನೀಡಲಾಗಿದೆ. ಮುಂದಿನ ವರ್ಷ ಕೃಷಿ ಉತ್ಪಾದನೆಯನ್ನು 15 ಟ್ರಿಲಿಯನ್ ರೂಪಾಯಿಗಳಿಗೆ ಹೆಚ್ಚಿಸುವ ಗುರಿಯನ್ನು ಹಮ್ಮಿಕೊಳ್ಳಲಾಗಿದೆ.

ಮೀನುಗಾರಿಕೆಯನ್ನು ವಿಸ್ತರಿಸುವ ಹಾಗೂ 500 ಮೀನು ಕೃಷಿಕರು ಹಾಗೂ ಉತ್ಪಾದನಾ ಸಂಘಗಳನ್ನು ಸ್ಥಾಪಿಸುವ ಸರಕಾರದ ನಿರ್ಧಾರದಿಂದಾಗ ಅವಂತಿ ಫೀಡ್ಸ್, ಅಪೆಕ್ಸ್ ಫ್ರೊಝನ್ ಫುಡ್ಸ್ ಹಾಗೂ ವಾಟರ್‌ಬೇಸ್ ನಂತಹ ಸಂಸ್ಥೆಗಳಿಗೆ ಲಾಭವಾಗಲಿದೆ.

 ಸರಕುಸಾಗಣೆ ರೈಲುಗಳು, ರೈಲುಗಳಲ್ಲಿ ಶೀತಾಗಾರಳು ಹಾಗೂ ಗೋದಾಮುಗಳ ವ್ಯವಸ್ಥೆಯನ್ನು ನಿರ್ಮಿಸುವ ಘೋಷಣೆಯಿಂದಾಗಿ ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಭಾರೀ ಲಾಭವಾಗಲಿದೆ. ಇಮಾಮಿ, ಹಿಂದೂಸ್ತಾನ್ ಲಿವರ್, ಡಾಬರ್, ಟಾಟಾ ಗ್ಲೋಬಲ್ ಕೂಡಾ ಈ ನಿಟ್ಟಿನಲ್ಲಿ ಪೈಪೋಟಿಗಿಳಿಯುವ ಸಾಧ್ಯತೆಯಿದೆ.

ನೀರು

  ಜಲಕ್ಷಾಮದ ಜಿಲ್ಲೆಗಳಲ್ಲಿ ಕೃಷಿ ವಲಯದ ಬೆಳವಣಿಗೆಗಾಗಿ ಬಜೆಟ್‌ನಲ್ಲಿ ಹಲವಾರು ಕ್ರಮಗಳನ್ನು ಪ್ರಕಟಿಸಲಾಗಿದೆ. ಇದರಿಂದಾಗಿ ನೀರು ಮತ್ತು ಚರಂಡಿ ನೀರು ಸಂಸ್ಕರಣ ಸ್ಥಾವರಗಳನ್ನು ನಿರ್ಮಿಸುವ ಕಂಪೆನಗಿಳ ಶೇರು ಬೆಲೆಯಲ್ಲಿ ಭಾರೀ ಹೆಚ್ಚಳವಾಗುವ ನಿರೀಕ್ಷೆಯಿದೆ.

ಸೋಲಾರ್‌ಪಂಪ್‌ಗಳ ಸ್ಥಾಪಿಸಲು ರೈತರಿಗೆ ನೆರವಾಗುವ ಸರಕಾರದ ಪ್ರಸ್ತಾಪದಿಂದ ಸೌರ ಪಂಪ್ ಉತ್ಪಾದನಾ ಸಂಸ್ಥೆಗಳಿಗೆ ಸಹಾಯವಾಗಲಿದೆ.

ಟೆಲಿಕಾಂ

ಹಳ್ಳಿಗಳಿಗೆ ಇಂಟರ್‌ನೆಟ್ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸುವ ಭಾರತ್‌ನೆಟ್ ಯೋಜನೆಯನ್ನು ಕೇಂದ್ರ ಸರಕಾರವು ಅಭಿವೃದ್ಧ್ಧಿ ಪಡಿಸಲಿದೆ. 2020-21ನೇ ಹಣಕಾಸು ವರ್ಷದಲ್ಲಿ ಟೆಲಿಕಾಂ ವಲಯಕ್ಕೆ 60 ಶತಕೋಟಿ ಡಾಲರ್ ರೂ ಒದಗಿಸುವ ಯೋಜನೆಯನ್ನ ಕೇಂದ್ರ ಸರಕಾರ ಹೊಂದಿದೆ.

ಆನ್‌ಲೈನ್ ಶಿಕ್ಷಣ ಸಂಸ್ಥೆಗಳು

 ಆನ್‌ಲೈನ್ ಶಿಕ್ಷಣ ವಲಯಕ್ಕೆ 993 ಶತಕೋಟಿ ರೂಪಾಯಿಗಳ ಅನುದಾನ ಘೋಷಿಸಲಾಗಿದೆ.

ಐಟಿ ಸಂಸ್ಥೆಗಳು

   

ದತ್ತಾಂಶ ಕೇಂದ್ರ (ಡಾಟಾ ಸೆಂಟರ್) ಪಾರ್ಕ್‌ಗಳ ನಿರ್ಮಾಣಕ್ಕೆ ಖಾಸಗಿ ಕ್ಷೇತ್ರಗಳಿಗೆ ಅವಕಾಶ ನೀಡುವ ನೀತಿಯಿಂದಾಗಿ ಟಿಸಿಎಸ್, ಇನ್ಫೋಸಿಸ್, ವಿಪ್ರೊ, ಎಚ್‌ಸಿಎಲ್ ಟೆಕ್ನಾಲಜೀಸ್, ಟಾಟಾ ಮಹೀಂದ್ರಾ, ಅದಾನಿ ಎಂಟರ್‌ಪ್ರೈಸಸ್ ಮತ್ತಿತರ ಮಾಹಿತಿ ತಂತ್ರಜ್ಞಾನ ಕಂಪೆನಿಗಳಇಗೆ ನೆರವಾಗಲಿದೆ.

 ಹಿನ್ನಡೆ ಕಂಡ ವಲಯಗಳು

 ಜೀವವಿಮಾ ನಿಗಮದ ಕೆಲವು ಪಾಲನ್ನು ಖಾಸಗಿಗೆ ಮಾರಾಟ ಮಾಡುವ ಸರಕಾರದ ನಿರ್ಧಾರವು ಖಾಸಗಿ ವಿಮಾ ಕಂಪೆನಿಗಳ ಶೇರುಗಳ ವೌಲ್ಯದ ಕುಸಿತಕ್ಕೆ ಕಾರಣವಾಗಲಿದೆ.

 ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು: 2020-21ರ ಸಾಲಿನಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ನೂತನ ಬಂಡವಾಳವನ್ನು ಒದಗಿಸುವ ಬಗ್ಗೆ ಬಜೆಟ್ ವೌನ ತಾಳಿದೆ. ಇದರಿಂದಾಗಿ ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾದ ಮೇಲೆ ಪರಿಣಾಮವಾಗುವ ಸಾಧ್ಯತೆಯಿದೆ.

ರಸಗೊಬ್ಬರ ಕಂಪೆನಿಗಳು

ಕಳೆದ ಸಲದಂತೆ ಶೂನ್ಯ ಬಜೆಟ್ ಕೃಷಿಗೆ ಈ ಬಜೆಟ್‌ನಲ್ಲಿಯೂ ಒತ್ತು ನೀಡಿರುವುದರಿಂದ, ರಸಗೊಬ್ಬರ ಬಳಕೆಯಲ್ಲಿ ಗಣನೀಯ ಕಡಿತವಾಗುವ ಸಾಧ್ಯತೆಯಿದೆ.

ರಿಯಲ್ ಎಸ್ಟೇಟ್ ಹಾಗೂ ಕಟ್ಟಡ ನಿರ್ಮಾಣ

  ಮಂಕಾಗಿರುವ ರಿಯಲ್‌ಎಸ್ಟೇಟ್ ವಲಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಬಜೆಟ್‌ನಲ್ಲಿ ಯಾವುದೇ ನಿರ್ದಿಷ್ಟ ಯೋಜನೆಗಳನ್ನು ಪ್ರಕಟಿಸಲಾಗಿಲ್ಲ. ರಿಯಲ್‌ಎಸ್ಟೇಟ್ ಉದ್ಯಮಕ್ಕೆ ಕೈಗಾರಿಕೆಯ ಸ್ಥಾನಮಾನ ನೀಡಿಕೆ, ಡೆವಲಪರ್‌ಗಳಿಗೆ ಹೆಚ್ಚಿನ ಸಾಲಸೌಲಭ್ಯ ಒದಗಿಸಬೇಕೆಂಬ ಬೇಡಿಕೆಗೆ ಬಜೆಟ್‌ನಲ್ಲಿ ಸ್ಪಂದಿಸಲಾಗಿಲ್ಲ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News