ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡ 108 ಪಿಎಫ್‌ಐ ಕಾರ್ಯಕರ್ತರ ಬಂಧನ

Update: 2020-02-03 15:41 GMT

ಲಕ್ನೋ,ಜ.3: ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳ ಜೊತೆ ನಂಟು ಹೊಂದಿದ್ದರೆನ್ನಲಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ 108 ಮಂದಿ ಕಾರ್ಯಕರ್ತರನ್ನು ಉತ್ತರಪ್ರದೇಶ ಪೊಲೀಸರು ಕಳೆದ ನಾಲ್ಕು ದಿನಗಳಲ್ಲಿ ಬಂಧಿಸಿದ್ದಾರೆ.

 ಲಕ್ನೋದಲ್ಲಿ ಸುದ್ದಿಗೋಷ್ಛಿಯಲ್ಲಿ ಈ ವಿಷಯ ತಿಳಿಸಿದ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್ ಕುಮಾರ್ ಅವಸ್ತಿ, ‘‘ಪಿಎಫ್‌ಐ ಕಾರ್ಯಕರ್ತರ ಬಂಧನ ಕಾರ್ಯಾಚರಣೆಯು ಕೇವಲ ಆರಂಭವಷ್ಟೇ ನಾವು ಆ ಸಂಘಟನೆಯ ಬೇರನ್ನು ಜಾಲಾಡಲಿದ್ದೇವೆ. ಅದರ ಹಣಕಾಸು ವ್ಯವಹಾರಗಳ ಬಗೆಗೂ ತನಿಖೆ ನಡೆಯುತ್ತಿದೆ. ಈ ಸಂಬಂಧ ನಾವು ಕೇಂದ್ರೀಯ ತನಿಖಾ ಏಜೆನ್ಸಿಗಳ ಜೊತೆ ಸಂಪರ್ಕದಲ್ಲಿದ್ದು, ಅವರೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ’’ ಎದರು.

ಸಿಎಎ ಪ್ರತಿಭಫಟನೆಗೆ ಸಂಬಂಧಿಸಿ ಈ ಮೊದಲು 25 ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿತ್ತು ಎಂದವರು ತಿಳಿಸಿದರು.

ಸಿಎಎ ವಿರೋಧಿ ಪ್ರತಿಭಟನೆಗೆ ಜೊತೆ ನಂಟು ಹೊಂದಿದ ಆರೋಪದಲ್ಲಿ ಬಂಧಿತರಾದ 108 ಪಿಎಫ್‌ಐ ಕಾರ್ಯಕರ್ತರ ಪೈಕಿ 21 ಮಂದಿ ಮೀರತ್, 16 ಮಂದಿ ಬಹ್ರೈಚ್ , 14 ಮಂದಿ ಲಕ್ನೋ, 9 ಮಂದಿ ಗಾಝಿಯಾಬಾದ್, 7 ಮಂದಿ ಸಾಮ್ಲಿ ಜಿಲ್ಲೆಗಳಲ್ಲಿ ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News