ಭಾರತದ ಮೇಲೆ ಬಾಂಬ್ ಹಾಕಿದವನ ಪುತ್ರನಿಗೆ ಪದ್ಮಶ್ರೀ: ದಿಗ್ವಿಜಯ ಸಿಂಗ್

Update: 2020-02-03 15:35 GMT

ಇಂದೋರ್, ಫೆ. 3: ಪಾಕಿಸ್ತಾನಿ ಮೂಲದ ಗಾಯಕ ಅದ್ನಾನ್ ಸಮಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿರುವುದಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಧ್ಯಪ್ರದೇಶದಲ್ಲಿ ‘ಸಂವಿಧಾನ ರಕ್ಷಿಸಿ, ದೇಶ ಉಳಿಸಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗ್, ಅದ್ನಾನ್ ಸೆಮಿ ಅವರ ತಂದೆ ಪಾಕಿಸ್ತಾನದ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಭಾರತದ ಮೇಲೆ ಬಾಂಬ್ ಸುರಿದ ಎಂದರು.

‘‘ಪಾಕಿಸ್ತಾನದಿಂದ ಬಂದ ಅದ್ನಾನ್ ಸಮಿ ಗಾಯಕನಾದ ಬಳಿಕ, ಆತನ ಪೌರತ್ವಕ್ಕೆ ನಾನು ಭಾರತ ಸರಕಾರಕ್ಕೆ ಶಿಫಾರಸು ಮಾಡಿದ್ದೆ. ಆತ ಮೋದಿ ಸರಕಾರದ ಅಡಿಯಲ್ಲಿ ಭಾರತದ ಪೌರತ್ವ ಪಡೆದುಕೊಂಡ. ಸಮಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಸರಕಾರಕ್ಕೆ ತಾನು ಎಂದೂ ಯಾವುದೇ ಶಿಫಾರಸು ಮಾಡಿಲ್ಲ’’ ಎಂದು ಅವರು ಹೇಳಿದರು. ‘‘ಇದಕ್ಕೆ ವಿರೋಧಾಭಾಸವಾಗಿ ಶತ್ರುಗಳೊಂದಿಗೆ ಹೋರಾಡಿದ ಸನಾವುಲ್ಲ ಖಾನ್ ಅವರನ್ನು ದಾಖಲೆಗಳನ್ನು ತೋರಿಸಲು ವಿಫಲವಾದ ಹಿನ್ನೆಲೆಯಲ್ಲಿ ಬಂಧನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಇದು ಮೋದಿ ಸರಕಾರದ ಪೌರತ್ವ ಕಾಯ್ದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News