Breaking News: ಕೊರೊನಾವೈರಸ್ 'ರಾಜ್ಯ ವಿಪತ್ತು': ಕೇರಳ ಸರಕಾರದ ಘೋಷಣೆ
Update: 2020-02-03 21:08 IST
ತಿರುವನಂತಪುರಂ: ರಾಜ್ಯದಲ್ಲಿ ಮೂವರು ಕೊರೊನಾವೈರಸ್ ಸೋಂಕಿಗೊಳಗಾಗಿರುವುದು ದೃಢಪಟ್ಟ ನಂತರ ಕೇರಳ ರಾಜ್ಯವು ಕೊರೊನಾವೈರಸ್ ನ್ನು 'ರಾಜ್ಯ ವಿಪತ್ತು' ಎಂದು ಘೋಷಿಸಿದೆ.
"ಈ ಘೋಷಣೆಯು ಜನರಲ್ಲಿ ಭೀತಿ ಹುಟ್ಟಿಸುವುದಕ್ಕಲ್ಲ. ವೈರಸ್ ಹರಡದೆ ಇರದಂತೆ ತಡೆಯಲು ಇದು ಮುನ್ನೆಚ್ಚರಿಕಾ ಕ್ರಮವಾಗಿದೆ" ಎಂದು ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಹೇಳಿದ್ದಾರೆ.
ಕಳೆದ ನಾಲ್ಕು ದಿನಗಳಲ್ಲಿ ಕೊರೊನಾವೈರಸ್ ನಿಂದ ಚೀನಾದಲ್ಲಿ 350 ಮಂದಿ ಮೃತಪಟ್ಟಿದ್ದಾರೆ.