ಸಿಎಎ ವಿರೋಧಿ ‘ಮುಂಬೈಬಾಗ್’ ಪ್ರತಿಭಟನಕಾರರ ಬಂಧನ, ಬಿಡುಗಡೆ

Update: 2020-02-03 16:05 GMT

ಮುಂಬೈ,ಜ.3: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಇಲ್ಲಿನ ಮುಂಬೈಬಾಗ್‌ ನಲ್ಲಿ ಧರಣಿ ನಡೆಸುತ್ತಿದ್ದ ಕೆಲವು ಪ್ರತಿಭಟನಕಾರರನ್ನು ಸೋಮವಾರ ಪೊಲೀಸರು ಸ್ವಲ್ಪ ಸಮಯದವರೆಗೆ ಬಂಧನದಲ್ಲಿರಿಸಿದ್ದರು. ಬಂಧಿತರಲ್ಲಿ ಲಿಂಗಸಮಾನತೆ ಹಕ್ಕುಗಳ ಹೋರಾಟಗಾರ್ತಿ ತ್ರಿಶಾ ಶೆಟ್ಟಿ ಕೂಡಾ ಸೇರಿದ್ದಾರೆ. ಬಂಧಿತರನ್ನು ಬೆಳಗ್ಗೆ 11:30ರ ವೇಳೆಗೆ ಬಂಧಿಸಲಾಗಿದ್ದು, ಸುಮಾರು 2 ಗಂಟೆಯ ತ್ತ್ತಿಗೆ ಬಿಡುಗಡೆಗೊಳಿಸಲಾಯಿತು.

  ಪ್ರತಿಭಟನೆಯ ಆಯೋಜಕರಾದ ಅಮೀರ್ ‌ಎದ್ರೆಸಿ ಅವರು ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡುತ್ತಾ, ‘‘ ಪ್ರತಿಭಟನಕಾರರನ್ನು ತೆರವುಗೊಳಿ ಸುವುದಕ್ಕಾಗಿ ಪೊಲೀಸರು ಭಯದ ವಾತಾವರಣ ಸೃಷ್ಟಿಸಿದ್ದು, ಇಡೀ ಪ್ರದೇಶಕ್ಕೆ ೇರಾವ್ ಹಾಕಿದ್ದಾರೆ. ಆದರೂ ನಾವು ಪ್ರತಿಭಟನೆಯನ್ನು ಮುಂದುವರಿಸಿದ್ದೇವೆ’’ ಎಂದವರು ಹೇಳಿದ್ದಾರೆ. ಈ ವಿಷಯವಾಗಿ ಚರ್ಚಿಸಲು ಪ್ರತಿಭಟನಕಾರರ ಗುಂಪೊಂದು ರಾಜ್ಯದ ಗೃಹ ಸಚಿವರನ್ನು ಭೇಟಿ ಮಾಡಲಿದ್ದಾರೆ ಎಂದು ಅಮೀರ್ ತಿಳಿಸಿದರು.

 ‘‘ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುವ ನನ್ನ ಮೂಲಭೂತಹಕ್ಕನ್ನು ಚಲಾಯಿಸಿದ್ದಕ್ಕಾಗಿ ಪೊಲೀಸರು ನ್ನನ್ನ್ತು ಗುರಿ ಮಾಡಿದ್ದಾರೆ’’ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಾನವಹಕ್ಕು ಹೋರಾಟಗಾರ್ತಿ ಹಾಗೂ ಖ್ಯಾತ ನ್ಯಾಯವಾದಿ ಶೀತಲ್ ಶೆಟ್ಟಿ ಆರೋಪಿಸಿದ್ದಾರೆ.

ಸಿಎಎ ಹಾಗೂ ಎನ್‌ಆರ್‌ಸಿ ವಿರೋಧಿಸಿ ಕೇಂದ್ರ ಮುಂಬೈಯ ವಸತಿಪ್ರದೇಶದ ರಸ್ತೆಯಲ್ಲಿ ಜವರಿ 26ರಿಂದೀಚೆಗೆ 100ಕ್ಕೂ ಅಧಿಕ ಮಹಿಳೆಯರು ಹಾಗೂ ಪುರುಷರು ಅನಿರ್ದಿಷ್ಟಾವಧಿಗೆ ಧರಣಿ ನಡೆಸುತ್ತಿದ್ದಾರೆ. ಸೋಮವಾರ ಬೆಗ್ಗೆ ಇನ್ನೂ ಹಲವಾರು ಮಂದಿ ಧರಣಿಗೆ ಸೇರಿಕೊಂಡಿದ್ದರು.

ಕಳೆದ ಆರು ವಾರಗಳಿಂದ ಸಿಎಎ ವಿರುದ್ಧ ನೂರಾರು ಮಹಿಳೆಯರು ದಿಲ್ಲಿಯ ಶಾಹೀನ್‌ಬಾಗ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆಯಿಂದ ಪ್ರೇರಿತವಾಗಿರುವುದರಿಂದ ಈ ಪ್ರತಿಭಟನೆಗೆ ಮುಂಬೈಭಾಗ್ ಎಂದೇ ಹೆಸರಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News