ಮುಸ್ಲಿಂ ಮಹಿಳೆಯರ ಸಹೋದರ ಎಂದು ಕರೆದುಕೊಳ್ಳುವ ಮೋದಿಗೆ ಅವರ ಬಗ್ಗೆ ಭಯ ಏಕೆ?: ಉವೈಸಿ ಪ್ರಶ್ನೆ

Update: 2020-02-05 07:17 GMT

ಹೊಸದಿಲ್ಲಿ: ಮುಸ್ಲಿಂ ಮಹಿಳೆಯರ ಸಹೋದರ ಎಂದು ಕರೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅವರ ಬಗ್ಗೆ ಭಯ ಏಕೆ ಎಂದು ಎಐಎಂಐಎಂ ಸಂಸದ ಅಸದುದ್ದೀನ್ ಉವೈಸಿ ಲೋಕಸಭೆಯಲ್ಲಿ ಮಂಗಳವಾರ ಪ್ರಶ್ನಿಸಿದರು. ಶಾಹೀನ್‍ಬಾಗ್ ಪ್ರತಿಭಟನಾಕಾರರನ್ನು ಮೋದಿ ಟೀಕಿಸಿದ ಬೆನ್ನಲ್ಲೇ ಉವೈಸಿ ಪ್ರಧಾನಿಗೆ ಈ ಪ್ರಶ್ನೆ ಎಸೆದರು.

ಸಿಎಎ ಹಾಗೂ ಎನ್‍ಆರ್‍ಸಿ ವಿಚಾರಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಎನ್‍ಪಿಆರ್ ಮತ್ತು ಎನ್‍ಆರ್‍ಸಿಗೆ ಸಂಬಂಧ ಇಲ್ಲ ಹಾಗೂ ದೇಶದಲ್ಲಿ ಎನ್‍ಆರ್‍ಸಿ ಜಾರಿಗೊಳಿಸುವುದಿಲ್ಲ ಎಂದು ಮೋದಿ ಸದನಕ್ಕೆ ತಿಳಿಸಲಿ ಎಂದು ಸವಾಲು ಹಾಕಿದರು.

ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಮೇಲಿನ ಚರ್ಚೆಯಲ್ಲಿ ಅವರು ಮಾತನಾಡಿದರು. ಎನ್‍ಆರ್‍ಸಿ, ಎನ್‍ಪಿಆರ್ ಹಾಗೂ ಸಿಎಎ ವಿರುದ್ಧ ಮುಸ್ಲಿಂ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಉಲ್ಲೇಖಿಸದೇ, "ಪ್ರಧಾನಿ ಮೋದಿಯವರು ತಮ್ಮನ್ನು ಮುಸ್ಲಿಂ ಮಹಿಳೆಯರ ಸಹೋದರ ಎಂದು ಕರೆದುಕೊಳ್ಳುತ್ತಿದ್ದಾರೆ. ಹಾಗಿದ್ದ ಮೇಲೆ ಅವರಿಗೆ ಮುಸ್ಲಿಂ ಮಹಿಳೆಯರ ಬಗ್ಗೆ ಭಯ ಏಕೆ" ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News