×
Ad

ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪಕ್ಕೆ ವಿದೇಶಗಳಿಗೆ ಹಕ್ಕಿಲ್ಲ: ವೆಂಕಯ್ಯ ನಾಯ್ಡು

Update: 2020-02-05 20:27 IST

ಹೊಸದಿಲ್ಲಿ,ಫೆ.5: ಭಾರತದ ಆಂತರಿಕ ವಿಷಯಗಳಲ್ಲಿ ಯಾವುದೇ ವಿದೇಶಿ ರಾಷ್ಟ್ರವು ಮೂಗು ತೂರಿಸುವಂತಿಲ್ಲ ಎಂದು ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಬುಧವಾರ ಇಲ್ಲಿ ಹೇಳಿದರು.

ಶಿವಸೇನೆಯ ಸದಸ್ಯ ಅನಿಲ ದೇಸಾಯಿ ಅವರು ಸಿಎಎ ವಿರುದ್ಧ ಐರೋಪ್ಯ ಒಕ್ಕೂಟದ ಸಂಸತ್‌ನಲ್ಲಿ ಮಂಡಿಸಲಾಗಿರುವ ನಿರ್ಣಯವನ್ನು ಸದನದಲ್ಲಿ ಪ್ರಸ್ತಾಪಿಸಿದ್ದರು.

‘ ಯಾವುದೇ ವಿಷಯಗಳಿರಲಿ,ಅವುಗಳನ್ನು ಚರ್ಚಿಸುವ ಮತ್ತು ನಿರ್ಧಾರವನ್ನು ಕೈಗೊಳ್ಳುವ ಸಾರ್ವಭೌಮ ಅಧಿಕಾರ ಭಾರತೀಯ ಸಂಸತ್‌ಗೆ ಇದೆ ಎಂದು ಈ ಸದನದ ಸಭಾಪತಿಯಾಗಿ ಮತ್ತು ದೇಶದ ಉಪರಾಷ್ಟ್ರಪತಿಯಾಗಿ ಅತ್ಯಂತ ಸ್ಪಷ್ಟವಾಗಿ ಹೇಳಲು ನಾನು ಬಯಸಿದ್ದೇನೆ. ಬಾಹ್ಯ ದೇಶಗಳಿಗೆ ನಮ್ಮ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ಹಕ್ಕು ಇಲ್ಲ ’ ಎಂದು ನಾಯ್ಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News