×
Ad

ಯಾವುದೇ ಆರೋಪವಿಲ್ಲದೆ ಒಮರ್ ಅಬ್ದುಲ್ಲಾ, ಮುಫ್ತಿ ಬಂಧನ ಆಘಾತಕಾರಿ: ಚಿದಂಬರಂ

Update: 2020-02-07 13:21 IST

ಹೊಸದಿಲ್ಲಿ, ಫೆ.7: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಹಾಗೂ ಒಮರ್ ಅಬ್ದುಲ್ಲಾರನ್ನು ಯಾವುದೇ ಆರೋಪಗಳಿಲ್ಲದೆ ಆರು ತಿಂಗಳುಗಳಿಗಿಂತಲೂ ಹೆಚ್ಚು ಸಮಯದಿಂದ ಗೃಹ ಬಂಧನದಲ್ಲಿರಿಸಿದ್ದಲ್ಲದೆ, ಕಳೆದ ರಾತ್ರಿ ಸಾರ್ವಜನಿಕ ಸುರಕ್ಷಾ ಕಾಯ್ದೆಯನ್ನು ವಿಧಿಸಿರುವ ಕೇಂದ್ರ ಸರಕಾರದ ಕ್ರಮಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಚಿದಂಬರಂ ಆಘಾತ ಹಾಗೂ ಹತಾಶೆ ವ್ಯಕ್ತಪಡಿಸಿದ್ದಾರೆ.

 ಇಂದು ಬೆಳಗ್ಗೆ ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಸರಣಿ ಟ್ವೀಟ್ ಮಾಡಿರುವ ಚಿದಂಬರಂ, ನಾಗರಿಕರನ್ನು ಯಾವುದೇ ಆರೋಪಗಳಿಲ್ಲದೆ ಬಂಧಿಸುವ ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರಲ್ಲದೆ, ಇದೊಂದು ಪ್ರಜಾಪ್ರಭುತ್ವದಲ್ಲಿ ಕೆಟ್ಟ ಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘‘ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಹಾಗೂ ಇತರರ ವಿರುದ್ಧ ಸಾರ್ವಜನಿಕ ಸುರಕ್ಷಾ ಕಾಯ್ದೆ ಹೇರಿರುವ ಕೇಂದ್ರ ಸರಕಾರದ ಕ್ರಮ ನನಗೆ ಆಘಾತ ತಂದಿದ್ದು, ಇದೊಂದು ಹತಾಶಕಾರಿ ನಿಲುವು. ಯಾವುದೇ ಆರೋಪಗಳಿಲ್ಲದೆ ಬಂಧಿಸುವುದು ಪ್ರಜಾಪ್ರಭುತ್ವದಲ್ಲಿ ಅಸಹ್ಯಕರ ಕ್ರಮವಾಗಿದೆ. ಅನ್ಯಾಯದ ಕಾನೂನು ಅಂಗೀಕಾರವಾದಾಗ ಜನರು ಶಾಂತಿಯುತ ಪ್ರತಿಭಟನೆ ನಡೆಸದೇ ಬೇರೆ ಯಾವ ಆಯ್ಕೆ ಇದೆ’’ ಎಂದು ಚಿದಂಬರಂ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News