‘ಶಿಕಾರಾ’ ಚಿತ್ರ ನೋಡಿ ಭಾವುಕರಾದ ಆಡ್ವಾಣಿ
Update: 2020-02-08 20:05 IST
ಹೊಸದಿಲ್ಲಿ,ಫೆ.8: ಶುಕ್ರವಾರ ಬಿಡುಗಡೆಗೊಂಡ ಖ್ಯಾತ ಬಾಲಿವುಡ್ ನಿರ್ಮಾಪಕ-ನಿರ್ದೇಶಕ ವಿಧು ವಿನೋದ ಛೋಪ್ರಾ ಅವರ ‘ಶಿಕಾರಾ:ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರಿ ಪಂಡಿತ್ಸ್ ’ಚಿತ್ರವನ್ನು ವೀಕ್ಷಿಸಿದ ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಅವರು ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದರು.
ಚಿತ್ರವು ಅಂತ್ಯಗೊಳ್ಳುತ್ತಿದ್ದಂತೆ ಭಾವುಕ ಆಡ್ವಾಣಿ ಕಣ್ಣೀರನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದ ಮತ್ತು ಛೋಪ್ರಾ ಅವರ ಬಳಿ ಮಂಡಿಯೂರಿ ಕುಳಿತುಕೊಂಡು ಅವರನ್ನು ಸಮಾಧಾನಿಸಲು ಯತ್ನಿಸುತ್ತಿದ್ದ ವೀಡಿಯೊ ತುಣುಕು ವೈರಲ್ ಆಗಿದೆ.
ಶಿವಕುಮಾರ ಧರ್ ಮತ್ತು ಆವರ ಪತ್ನಿ ಶಾಂತಿ ಪಾತ್ರಗಳ ಮೂಲಕ ಕಾಶ್ಮೀರಿ ಪಂಡಿತರ ಸಾಮೂಹಿಕ ವಲಸೆಯನ್ನು ಚಿತ್ರವು ತೋರಿಸಿದೆ. ಚಿತ್ರದಲ್ಲಿ ಧರ್ ಪಾತ್ರವನ್ನು ಆದಿಲ್‌ಖಾನ್ ಮತ್ತು ಶಾಂತಿ ಪತ್ರವನ್ನು ಸಾದಿಯಾ ನಿರ್ವಹಿಸಿದ್ದಾರೆ.