ಮೂರನೇ ಏಕದಿನ: ನ್ಯೂಝಿಲ್ಯಾಂಡ್‌ಗೆ 297 ರನ್ ಗುರಿ

Update: 2020-02-11 09:18 GMT

ವೌಂಟ್‌ವೌಂಗಾನುಯ್, ಫೆ. 11: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಆಕರ್ಷಕ ಶತಕ(112, 113ಎಸೆತ)ಶತಕದ ಸಹಾಯದಿಂದ ಭಾರತ ತಂಡ ಇಲ್ಲಿ ಮಂಗಳವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡದ ಗೆಲುವಿಗೆ 297 ರನ್ ಗುರಿ ನೀಡಿದೆ.

 ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ತಂಡ ಭಾರತವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು.

ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 296 ರನ್ ಗಳಿಸಿತು. ಆರಂಭಿಕ ಆಟಗಾರನಾಗಿ ಮಾಯಾಂಕ್ ಅಗರ್ವಾಲ್(1) ಮತ್ತೊಮ್ಮೆ ವಿಫಲರಾದರು. ನಾಯಕ ವಿರಾಟ್ ಕೊಹ್ಲಿ(9)ಇಂದು ಬೇಗನೇ ಔಟಾದರು. ಆಗ ತಂಡಕ್ಕೆ 3ನೇ ವಿಕೆಟ್ ಜೊತೆಯಾಟದಲ್ಲಿ ಪೃಥ್ವಿ ಶಾ(40) ಹಾಗೂ ಶ್ರೇಯಸ್ ಅಯ್ಯರ್(62, 63 ಎಸೆತ, 9 ಬೌಂಡರಿ)30 ರನ್ ಸೇರಿಸಿ ತಂಡವನ್ನು ಆಧರಿಸಿದರು.

ರಾಹುಲ್ ಆಕರ್ಷಕ ಶತಕ(112, 113 ಎಸೆತ, 9 ಬೌಂಡರಿ, 2ಸಿಕ್ಸರ್)ಸಿಡಿಸಿದ್ದಲ್ಲದೆ, ಶ್ರೇಯಸ್ ಹಾಗೂ ಮನೀಷ್ ಪಾಂಡೆ(42, 48 ಎಸೆತ)ಅವರೊಂದಿಗೆ ಕ್ರಮವಾಗಿ 4 ಹಾಗೂ 5ನೇ ವಿಕೆಟ್ ಜೊತೆಯಾಟದಲ್ಲಿ 100 ಹಾಗೂ 107 ರನ್ ಸೇರಿಸಿ ತಂಡದ ಮೊತ್ತವನ್ನು 300ರ ಸನಿಹ ಕೊಂಡೊಯ್ಯಲು ನೆರವಾದರು.

ನ್ಯೂಝಿಲ್ಯಾಂಡ್‌ನ ಪರ ಬೆನ್ನೆಟ್(4-64)ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News