'ಪಾಕಿಸ್ತಾನದ ವಿರುದ್ಧ ಗೆದ್ದ ಭಾರತ': ದಿಲ್ಲಿ ಚುನಾವಣಾ ಫಲಿತಾಂಶಕ್ಕೆ ಟ್ವಿಟರಿಗರ ಪ್ರತಿಕ್ರಿಯೆ

Update: 2020-02-11 12:07 GMT

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆಯನ್ನು 'ಭಾರತ-ಪಾಕ್ ಹಣಾಹಣಿ'ಗೆ ಹೋಲಿಸಿ ಟ್ವೀಟ್ ಮಾಡಿದ್ದ ಬಿಜೆಪಿ ಅಭ್ಯರ್ಥಿ  ಕಪಿಲ್ ಮಿಶ್ರಾ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಜತೆಗೆ ಅವರು ಜನವರಿ 23ರಂದು ಮಾಡಿದ ಟ್ವೀಟ್ ಅವರನ್ನು ಮತ್ತೆ ಕಾಡಲು  ಆರಂಭಿಸಿದೆ. "ಫೆಬ್ರವರಿ 8ರಂದು ಭಾರತ ಮತ್ತು ಪಾಕಿಸ್ತಾನ ದಿಲ್ಲಿಯ ರಸ್ತೆಗಳಲ್ಲಿ ಸ್ಪರ್ಧಿಸಲಿದೆ'' ಎಂದು ಮಿಶ್ರಾ ಹೇಳಿಕೊಂಡಿದ್ದರು.

ಇದನ್ನೇ ಆಧಾರವಾಗಿಟ್ಟುಕೊಂಡು ಹಲವು ಟ್ವಿಟರಿಗರು ಕಪಿಲ್ ಮಿಶ್ರಾ ಅವರ ಕಾಲೆಳೆದಿದ್ದಾರೆ.

ಭಾರತ-ಪಾಕ್ ಪಂದ್ಯದಲ್ಲಿ ಯಾರು ನಿಜವಾಗಿ ಗೆದ್ದರೆಂಬುದನ್ನೂ ಹಲವರು ಅವರಿಗೆ ನೆನಪಿಸಿದ್ದಾರೆ. ಒಬ್ಬರಂತೂ `ಪಾಕಿಸ್ತಾನ್ ಸೋತಿತು' ಎಂದು ಟ್ವೀಟ್ ಮಾಡಿದರೆ ಇನ್ನೊಬ್ಬರು `ಭಾರತ ಗೆದ್ದಿತು' ಎಂದಿದ್ದಾರೆ. ಇನ್ನೊಂದು ಟ್ವೀಟ್‍ನಲ್ಲಿ  ``ಭಾರತ ಸರಣಿಯನ್ನೇ ಗೆದ್ದಿದೆ ಎಂದು ಅಂದುಕೊಂಡಿದ್ದೇನೆ'' ಎಂದು ಬರೆಯಲಾಗಿದೆ. ಇನ್ನೊಬ್ಬ ಟ್ವಿಟ್ಟರಿಗರು "ಭಾರತಕ್ಕೆ 10 ವಿಕೆಟ್ ಜಯ" ಎಂದು ಬಣ್ಣಿಸಿದ್ದಾರೆ.

ಅಷ್ಟಕ್ಕೂ ಸೋಮವಾರದ ತನಕ ಕಪಿಲ್ ಮಿಶ್ರಾ  ದಿಲ್ಲಿಯಲ್ಲಿ ಬಿಜೆಪಿಯೇ ಸರಕಾರ ರಚಿಸುವುದು ಎಂದು ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News