ದಿಲ್ಲಿಯಲ್ಲಿ 1993ರಿಂದ ಕಳಪೆ ಸಾಧನೆ ತೋರಿದ ಬಿಎಸ್ಪಿ

Update: 2020-02-11 15:06 GMT

ಹೊಸದಿಲ್ಲಿ, ಫೆ. 11: ದಿಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಬಿಎಸ್ಪಿ ಮೊದಲ ಬಾರಿಗೆ 1993ರಲ್ಲಿ ಸ್ಪರ್ಧಿಸಿತ್ತು. 55 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು ಹಾಗೂ ಶೇ. 1.88 ಮತಗಳನ್ನು ಪಡೆದುಕೊಂಡಿತ್ತು. 1998ರಲ್ಲಿ 40 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು ಹಾಗೂ ಶೇ. 5.76 ಮತಗಳನ್ನು ಪಡೆದುಕೊಂಡಿತ್ತು. 2003ರಲ್ಲಿ ಬಿಎಸ್ಪಿಯ ಮತ ಗಳಿಕೆಯ ಪ್ರಮಾಣ ಹೆಚ್ಚಾಗಿದ್ದು, ಶೇ. 8.96 ಮತಗಳನ್ನು ಪಡೆದುಕೊಂಡಿತ್ತು. ಅನಂತರ 2007ರಲ್ಲಿ ನಡೆದ ಉತ್ತರಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಬಿಎಸ್ಪಿ 206 ಸ್ಥಾನಗಳನ್ನು ಗಳಿಸಲು ಸಫಲವಾಗಿತ್ತು.

ಅನಂತರ 2008ರಲ್ಲಿ ನಡೆದ ದಿಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಬಿಎಸ್ಪಿ ಶೇ. 14.5 ಮತಗಳನ್ನು ಪಡೆದುಕೊಂಡಿತ್ತು ಹಾಗೂ ಎರಡು ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. 2013ರ ದಿಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಬಿಎಸ್ಪಿಯ 69 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಶೇ. 5.35 ಮತಗಳನ್ನು ಪಡೆದಿದ್ದರು.

 2015ರಲ್ಲಿ ಬಿಎಸ್ಪಿ ಪಡೆದ ಮತಗಳ ಪ್ರಮಾಣ ಶೇ. 1.30ಕ್ಕೆ ಇಳಿಕೆಯಾಗಿತ್ತು. ಆದರೆ, 2020ರಲ್ಲಿ ಇದುವರೆಗೆ ಹೋಲಿಸಿದರೆ ಕನಿಷ್ಠ ಪ್ರಮಾಣದ ಮತಗಳನ್ನು ಪಡೆದು ಬಿಎಸ್ಪಿ ಕಳಪೆ ಸಾಧನೆ ತೋರಿಸಿದೆ. ದಿಲ್ಲಿಯಲ್ಲಿ ಬಿಎಸ್ಪಿ 70 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ದಿಲ್ಲಿಯಲ್ಲಿ 20 ಲಕ್ಷ ದಲಿತರಿದ್ದಾರೆ. ಇದರಲ್ಲಿ 12 ಮೀಸಲು ಸ್ಥಾನಗಳು ಇದ್ದುವು. ‘‘ಕೇವಲ ದಲಿತರು ಮಾತ್ರ ಬಿಎಸ್ಪಿಗೆ ಮತ ಚಲಾಯಿಸಿದರೆ, ನಮಗೆ ಬೇರೆ ಯಾರ ಮತ ಬೇಕಾಗಿಲ್ಲ’’ ಎಂದು ಬಿಎಸ್ಪಿಯ ದಿಲ್ಲಿ ವರಿಷ್ಠ ಲಕ್ಷ್ಮಣ್ ಸಿಂಗ್ ಹೇಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News