ಹವಾಮಾನ ಬದಲಾವಣೆ ಎದುರಿಸಲು ಅಗಾಧ ವೆಚ್ಚ: ವಿಶ್ವಸಂಸ್ಥೆ

Update: 2020-02-11 16:41 GMT

ಪ್ಯಾರಿಸ್ (ಫ್ರಾನ್ಸ್), ಫೆ. 11: ಹಸಿವು, ಬಡತನ ಮತ್ತು ಹವಾಮಾನ ಬದಲಾವಣೆಯ ಇತರ ಪರಿಣಾಮಗಳ ವಿರುದ್ಧದ ಹೋರಾಟದಲ್ಲಿ ಕೃಷಿಯನ್ನು ಬಲಪಡಿಸುವುದಕ್ಕಾಗಿ ಹೆಚ್ಚು ಪ್ರಮಾಣದಲ್ಲಿ ಹಣವನ್ನು ಖರ್ಚುಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವಿಶ್ವಸಂಸ್ಥೆಯ ಅಂತರ್‌ರಾಷ್ಟ್ರೀಯ ಕೃಷಿ ಅಭಿವೃದ್ಧಿ ನಿಧಿಯ ಅಧ್ಯಕ್ಷ ಗಿಲ್ಬರ್ಟ್ ಹೌಂಗ್‌ಬೊ ಹೇಳಿದ್ದಾರೆ.

 ‘‘2022ರಿಂದ 2024ರ ವರೆಗಿನ ಕಾರ್ಯಕ್ರಮಗಳಿಗಾಗಿ ನಾವು ಸದಸ್ಯ ದೇಶಗಳಿಂದ ದೇಣಿಗೆಯ ರೂಪದಲ್ಲಿ 1.7 ಬಿಲಿಯ ಡಾಲರ್ (ಸುಮಾರು 12,114 ಕೋಟಿ ರೂಪಾಯಿ) ಹಣವನ್ನು ಎದುರು ನೋಡುತ್ತಿದ್ದೇವೆ’’ ಎಂದು ಸೋಮವಾರ ಎಎಫ್‌ಪಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು ಹೇಳಿದರು.

‘‘ಜಗತ್ತಿನಾದ್ಯಂತ ಹಸಿವೆ ಹೆಚ್ಚಾಗಿದ್ದು ಅಗತ್ಯಗಳೂ ಗಣನೀಯವಾಗಿ ಹೆಚ್ಚಿವೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News