×
Ad

5 ಲಕ್ಷ ಕೀಟ ಸಂಕುಲ ವಿನಾಶದತ್ತ: ವಿಜ್ಞಾನಿಗಳು

Update: 2020-02-11 22:19 IST

ಪ್ಯಾರಿಸ್ (ಫ್ರಾನ್ಸ್), ಫೆ. 11: ಭೂಮಿಯಲ್ಲಿರುವ 10 ಲಕ್ಷ ಪ್ರಾಣಿ ಮತ್ತು ಸಸ್ಯ ಪ್ರಭೇದಗಳು ವಿನಾಶದ ಅಂಚಿಗೆ ತಲುಪಿದ್ದು, ಈ ಪೈಕಿ ಅರ್ಧದಷ್ಟು ಕೀಟಗಳಾಗಿವೆ ಹಾಗೂ ಅವುಗಳ ವಿನಾಶವು ಮಾನವಕುಲಕ್ಕೂ ವಿನಾಶಕಾರಿಯಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

‘‘ಪ್ರಸಕ್ತ ಕೀಟ ವಿನಾಶ ಬಿಕ್ಕಟ್ಟು ಅತ್ಯಂತ ಕಳವಳಕಾರಿಯಾಗಿದೆ’’ ಎಂದು ಫಿನ್‌ ಲ್ಯಾಂಡ್‌ನ ಮ್ಯೂಸಿಯಮ್ ಆಫ್ ನ್ಯಾಚುರಲ್ ಹಿಸ್ಟರಿಯಲ್ಲಿ ಜೀವಶಾಸ್ತ್ರಜ್ಞರಾಗಿರುವ ಪೆಡ್ರೊ ಕಾರ್ಡೋಸೊ ಹೇಳಿದ್ದಾರೆ. ಅವರು ‘ವಾರ್ನಿಂಗ್ ಟು ಹ್ಯುಮೇನಿಟಿ’ ಎಂಬ ಅಧ್ಯಯನ ವರದಿಯ ಪ್ರಧಾನ ಲೇಖಕರೂ ಆಗಿದ್ದಾರೆ.

  ‘‘ಆದರೂ, ಈಗ ನಮಗೆ ತಿಳಿದಿರುವುದು ನೀರಿನಲ್ಲಿ ಮುಳುಗಿರುವ ಹಿಮರಾಶಿಯ ಮೇಲ್ಭಾಗದಲ್ಲಿ ಕಾಣುವ ಚಿಕ್ಕ ಭಾಗವಷ್ಟೇ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News