ಕರ್ತಾರ್ ಪುರ ಗುರುದ್ವಾರಕ್ಕೆ ಭೇಟಿ ನೀಡಲಿರುವ ಗುಟೆರಸ್
Update: 2020-02-11 22:31 IST
ವಿಶ್ವಸಂಸ್ಥೆ, ಫೆ. 11: ಮುಂದಿನ ವಾರ ಪಾಕಿಸ್ತಾನಕ್ಕೆ ನೀಡುವ ಭೇಟಿಯ ವೇಳೆ, ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅಲ್ಲಿನ ಕರ್ತಾರ್‌ಪುರದಲ್ಲಿರುವ ಸಿಖ್ ಧರ್ಮದ ಸಂಸ್ಥಾಪಕ ಗುರು ನಾನಕ್ ದೇವ್‌ರ ಅಂತಿಮ ವಿಶ್ರಾಂತಿ ತಾಣವನ್ನು ಸಂದರ್ಶಿಸಲಿದ್ದಾರೆ.
ವಿಶ್ವಸಂಸ್ಥೆಯ ಮುಖ್ಯಸ್ಥರು ರವಿವಾರ ಇಸ್ಲಾಮಾಬಾದ್‌ಗೆ ತೆರಳುತ್ತಾರೆ ಹಾಗೂ ಆ ದೇಶದ ಪ್ರಧಾನಿ ಇಮ್ರಾನ್ ಖಾನ್ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಮುಂದಿನ ಮಂಗಳವಾರ ಅವರು ಸಿಖ್ಖರ ಅತ್ಯಂತ ಪವಿತ್ರ ಕ್ಷೇತ್ರಗಳ ಪೈಕಿ ಒಂದಾದ ಗುರುದ್ವಾರ ಕರ್ತಾರ್‌ಪುರ ಸಾಹಿಬ್‌ಗೆ ಭೇಟಿ ನೀಡಲಿದ್ದಾರೆ ಎಂದು ವಿಶ್ವಸಂಸ್ಥೆಯ ಉಪ ವಕ್ತಾರ ಫರ್ಹಾನ್ ಹಕ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಗುರು ನಾನಕ್ ದೇವ್ ತನ್ನ ಬದುಕಿನ ಕೊನೆಯ 18 ವರ್ಷಗಳನ್ನು ಕರ್ತಾರ್‌ಪುರದಲ್ಲಿ ಕಳೆದಿದ್ದರು.