ಪ್ರಜಾಪ್ರಭುತ್ವದಲ್ಲಿ ಧ್ವನಿ ಎತ್ತುವುದು ಅಪರಾಧವಲ್ಲ:ಪ್ರಿಯಾಂಕಾ ಗಾಂಧಿ

Update: 2020-02-12 14:47 GMT

ಲಕ್ನೋ,ಫೆ.12: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಬುಧವಾರ ಉತ್ತರ ಪ್ರದೇಶದಲ್ಲಿಯ ಸಮಾಜವಾದಿ ಪಕ್ಷದ ಭದ್ರಕೋಟೆ ಅಝಮ್‌ಗಡಕ್ಕೆ ಭೇಟಿ ನೀಡಿ ಬಂಧಿತ ಸಿಎಎ ವಿರೋಧಿ ಪ್ರತಿಭಟನಾಕಾರರ ಕುಟುಂಬಗಳೊಂದಿಗೆ ಸುಮಾರು ಒಂದು ಗಂಟೆ ಕಾಲ ಕಳೆದರು.

‘ಪ್ರಜಾಪ್ರಭುತ್ವದಲ್ಲಿ ಧ್ವನಿ ಎತ್ತುವುದು ಅಪರಾಧವಲ್ಲ ಮತ್ತು ಅನ್ಯಾಯಕ್ಕೆ ಗುರಿಯಾದವರ ಬೆಂಬಲಕ್ಕೆ ನಿಲ್ಲುವುದು ನನ್ನ ಕರ್ತವ್ಯವಾಗಿದೆ’ ಎಂದು ಪ್ರಿಯಾಂಕಾ ಭೇಟಿಗೆ ಮುನ್ನ ಟ್ವೀಟಿಸಿದ್ದರು.

ಮಹಿಳಾ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕ್ರಮದ ಕುರಿತು ಎಸ್‌ಪಿ ನಾಯಕ ಅಖಿಲೇಶ ಯಾದವ ಅವರ ವೌನದ ಕುರಿತು ಪ್ರಶ್ನೆಗಳ ನಡುವೆಯೇ ಪ್ರಿಯಾಂಕಾರ ಅಝಮ್‌ಗಡ ಭೇಟಿ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News