ಇವಿಎಂ ತಿರುಚಲು ಸಾಧ್ಯವಿಲ್ಲ, ಮತಪತ್ರಕ್ಕೆ ಹಿಂದಿರುಗುವ ಪ್ರಶ್ನೆಯೇ ಇಲ್ಲ: ಮುಖ್ಯ ಚುನಾವಣಾ ಆಯುಕ್ತ

Update: 2020-02-12 15:26 GMT

ಹೊಸದಿಲ್ಲಿ, ಫೆ. 12: ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲ. ಆದುದರಿಂದ ಮತಪತ್ರಕ್ಕೆ ಹಿಂದಿರುಗುವ ಯಾವುದೇ ಪ್ರಶ್ನೆ ಇಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಬುಧವಾರ ಪುನರುಚ್ಛರಿಸಿದ್ದಾರೆ.

ವಿವಿಧ ಚುನಾವಣಾ ಸುಧಾರಣೆ ಹಾಗೂ ಮಾದರಿ ನೀತಿ ಸಂಹಿತೆ ಕುರಿತು ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗ ವಿವಿಧ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಲಿದೆ ಎಂದು ಅವರು ತಿಳಿಸಿದರು.

 ‘ಟೈಮ್ಸ್ ನೌ ಶೃಂಗ’ದಲ್ಲಿ ಮಾತನಾಡಿದ ಅವರು, ಇವಿಎಂಗಳು ಕಾರು ಅಥವಾ ಪೆನ್ ತರ ಕಾರ್ಯ ನಿರ್ವಹಿಸದೇ ಇರುವ ಸಾಧ್ಯತೆ ಇದೆ. ಆದರೆ, ಅದನ್ನು ತಿರುಚಲು ಸಾಧ್ಯವಿಲ್ಲ ಎಂದರು. ಎವಿಎಂ ಕಳೆದ 20 ವರ್ಷಗಳಿಂದ ಉಪಯೋಗದಲ್ಲಿ ಇದೆ. ಇನ್ನು ಮತಪತ್ರಕ್ಕೆ ಹಿಂದಿರುಗಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ಮತದಾನ ನಡೆಸಲು ಇವಿಎಂ ಬಳಸುವುದನ್ನು ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ಎತ್ತಿ ಹಿಡಿದಿವೆ ಎಂದು ಸುನೀಲ್ ಅರೋರಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News