ಸೆಬಿ ಕೆಂಗಣ್ಣು: ಕೇರ್ ರೇಟಿಂಗ್‌ನ ಅಧ್ಯಕ್ಷ ಮೈನಾಕ್ ರಾಜೀನಾಮೆ

Update: 2020-02-13 15:15 GMT

ಹೊಸದಿಲ್ಲಿ,ಫೆ.13: ಕೇರ್ ರೇಟಿಂಗ್ಸ್‌ನ ಅಧ್ಯಕ್ಷ ಎಸ್.ಬಿ.ಮೈನಾಕ್ ಅವರು ತನ್ನ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ಎಲ್‌ಐಸಿಯ ಮಾಜಿ ಆಡಳಿತ ನಿರ್ದೇಶಕರೂ ಆಗಿರುವ ಮೈನಾಕ್ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ಯನ್ನು ನೀಡಿದ್ದಾರೆ ಎಂದು ಕೇರ್ ರೇಟಿಂಗ್ಸ್ ಶೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ಸಲ್ಲಿಸಿದೆ.

ಆದರೆ ಐಎಲ್ ಆ್ಯಂಡ್ ಎಫ್‌ಎಸ್ ವಿವಾದಕ್ಕೆ ಸಂಬಂಧಿಸಿದಂತೆ ಮೈನಾಕ್ ರಾಜೀನಾಮೆಯನ್ನು ಪಡೆದುಕೊಳ್ಳುವಂತೆ ಸೆಬಿ ಕೇರ್ ರೇಟಿಂಗ್ಸ್‌ಗೆ ಸೂಚಿಸಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಸಮಾಲೋಚನಾ ಸಂಸ್ಥೆ ಇವೈ ಈ ವಾರದ ಆದಿಯಲ್ಲಿ ಕೇರ್ ಉದ್ಯೋಗಿಗಳ ಹೇಳಿಕೆಗಳು, ವಾಟ್ಸ್‌ಆ್ಯಪ್ ಸಂದೇಶಗಳು ಮತ್ತು ಕಾಲ್ ರೆಕಾರ್ಡಿಂಗ್‌ಗಳನ್ನು ಒಳಗೊಂಡಿದ್ದ ವಿಧಿವಿಜ್ಞಾನ ವರದಿಯನ್ನು ಸೆಬಿಗೆ ಸಲ್ಲಿಸಿತ್ತು. ಸುಸ್ತಿದಾರ ಕಂಪನಿಯಾಗಿರುವ ಐಎಲ್ ಆ್ಯಂಡ್ ಎಫ್‌ಎಸ್‌ನ ರೇಟಿಂಗ್‌ನ್ನು ತಡೆಹಿಡಿಯುವಂತೆ ಮತ್ತು ಕೆಲವು ಪ್ರಕರಣಗಳಲ್ಲಿ ಮೌಲ್ಯಮಾಪನಗಳನ್ನು ಬದಲಿಸದಂತೆ ಮೈನಾಕ್ ಸಿಬ್ಬಂದಿಗಳಿಗೆ ಸೂಚಿಸಿದ್ದರು ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ ಆಂಗ್ಲಮಾಧ್ಯಮವೊಂದು ಉಲ್ಲೇಖಿಸಿದೆ.

ಐಎಲ್ ಆ್ಯಂಡ್ ಎಫ್‌ಎಸ್ ಸೇರಿದಂತೆ ಕಂಪನಿಗಳ ರೇಟಿಂಗ್‌ಗಳಲ್ಲಿ ಆಡಳಿತ ವರ್ಗದ ಹಸ್ತಕ್ಷೇಪದ ದೂರು ಕೇಳಿ ಬಂದನಂತರ ಕೇರ್ ರೇಟಿಂಗ್ಸ್‌ನ ಎಂಡಿ ಮತ್ತು ಸಿಇಒ ರಾಜೇಶ ಮೊಕಾಶಿ ಅವರು ಡಿಸೆಂಬರ್ 2019ರಲ್ಲಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News