ನಾಗಾಲ್ಯಾಂಡ್: ಸಿಎಎ ವಿರುದ್ಧ ಪ್ರತಿಭಟನೆಯನ್ನು ಬೆಂಬಲಿಸಿ ಪ್ರತಿಪಕ್ಷ ಸೇರಿದ ಬಿಜೆಪಿ ನಾಯಕರು

Update: 2020-02-13 15:22 GMT
file photo

 ಕೊಹಿಮಾ,ಫೆ.13: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ವಿರುದ್ಧ ಪ್ರತಿಭಟನೆಯನ್ನು ಬೆಂಬಲಿಸಿ ಬಿಜೆಪಿಯ 22 ಸ್ಥಳೀಯ ನಾಯಕರು ಗುರುವಾರ ಪ್ರತಿಪಕ್ಷ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್)ಗೆ ಸೇರ್ಪಡೆಗೊಂಡಿದ್ದಾರೆ.

ದಿಮಾಪುರದಲ್ಲಿನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಎನ್‌ಪಿಎಫ್ ಅಧ್ಯಕ್ಷ ಶುರಹೊಜೆಲಿ ಲೆಜಿತ್ಸು ಅವರು,ಈ ನಾಯಕರು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಜೆಪಿ ನಾಯಕರು ಎನ್‌ಪಿಎಫ್‌ಗೆ ಸೇರುವ ನಿರೀಕ್ಷೆಯಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 ಎನ್‌ಪಿಎಫ್‌ಗೆ ಸೇರ್ಪಡೆಗೊಂಡವರಲ್ಲಿ ಬಿಜೆಪಿಯ ಕಾನೂನು ಮತ್ತು ಕಾನೂನು ವ್ಯವಹಾರಗಳ ಘಟಕದ ಸಂಚಾಲಕ ತೋಷಿ ಲೊಂಗ್ಕುಮೆರ್ ಮತ್ತು ಅಲ್ಪಸಂಖ್ಯಾತ ಮೋರ್ಚಾದ ಮಾಜಿ ರಾಜ್ಯಾಧ್ಯಕ್ಷ ಮುಖಿಬುರ್ ರೆಹಮಾನ್ ಸೇರಿದ್ದಾರೆ.

ಸಿಎಎ ಶೀಘ್ರವೇ ಅಥವಾ ತಡವಾಗಿಯಾದರೂ ನಿರ್ದಿಷ್ಟವಾಗಿ ಈಶಾನ್ಯ ರಾಜ್ಯಗಳ ಜನರಿಗೆ ತೊಂದರೆಯನ್ನುಂಟು ಮಾಡಲಿದೆ ಎಂದು ಹೇಳಿದ ರಹಮಾನ್,ನಾಗಾಲ್ಯಾಂಡ್‌ನ ಹೆಚ್ಚಿನ ಭಾಗಗಳಲ್ಲಿ ಇನ್ನರ್ ಲೈನ್ ಪರ್ಮಿಟ್ ವ್ಯವಸ್ಥೆ ಅಸಿತ್ವದಲ್ಲಿದೆಯಾದರೂ ಅದು ಅಕ್ರಮ ವಲಸಿಗರು ರಾಜ್ಯವನ್ನು ಪ್ರವೇಶಿಸುವುದನ್ನು ತಡೆಯುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News