ವಲಸಿಗರನ್ನು ಸಾಗಿಸಿದ ಭಾರತೀಯ ಉಬರ್ ಚಾಲಕನಿಗೆ ಜೈಲು

Update: 2020-02-14 16:43 GMT

ನ್ಯೂಯಾರ್ಕ್, ಫೆ. 14: ಕೆನಡ ಗಡಿಯ ಮೂಲಕ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿದ ವಲಸಿಗರನ್ನು ಸಾಗಿಸಿರುವುದಕ್ಕಾಗಿ ಉಬರ್ ಕಾರಿನ ಭಾರತೀಯ ಚಾಲಕನೊಬ್ಬನಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಅಮೆರಿಕದಲ್ಲಿ ಆಶ್ರಯ ಪಡೆದಿರುವ 30 ವರ್ಷದ ಜಸ್ವಿಂದರ್ ಸಿಂಗ್‌ಗೆ ನ್ಯೂಯಾರ್ಕ್‌ನ ಉಟಿಕದಲ್ಲಿರುವ ಫೆಡರಲ್ ನ್ಯಾಯಾಲಯದ ನ್ಯಾಯಾಧೀಶ ಡೇವಿಡ್ ಹರ್ಡ್ ಗುರುವರ ಶಿಕ್ಷೆ ವಿಧಿಸಿದರು. ಶಿಕ್ಷೆ ಪೂರ್ಣಗೊಳಿಸಿದ ಬಳಿಕ ಜಸ್ವಿಂದರ್ ಸಿಂಗ್‌ನನ್ನು ಅಮೆರಿಕ ಸರಕಾರವು ಗಡಿಪಾರುಗೊಳಿಸುವ ಸಾಧ್ಯತೆಯಿದೆ.

2019 ಜನವರಿ ಮತ್ತು ಮೇ ತಿಂಗಳ ನಡುವೆ ಅಕ್ರಮವಾಗಿ ಗಡಿ ದಾಟಿ ಬಂದ ಹಲವರನ್ನು ಹಣಕ್ಕಾಗಿ ದೇಶದ ಒಳಗೆ ಸಾಗಿಸಿರುವುದನ್ನು ಸಿಂಗ್ ಒಪ್ಪಿಕೊಂಡಿದ್ದಾರೆ ಎಂದು ಕಾನೂನು ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News