ಅಲೋಕ್ ಶರ್ಮ ಬ್ರಿಟನ್‌ನ ನೂತನ ವಾಣಿಜ್ಯ ಸಚಿವ

Update: 2020-02-14 16:52 GMT
     ಫೋಟೊ ಕೃಪೆ :twitter.com/AlokSharma_RDG

ಲಂಡನ್, ಫೆ. 14: ಭಾರತ ಮೂಲದ ಅಲೋಕ್ ಶರ್ಮರನ್ನು ಬ್ರಿಟನ್‌ನ ನೂತನ ವಾಣಿಜ್ಯ ಸಚಿವರನ್ನಾಗಿ ಗುರುವಾರ ನೇಮಿಸಲಾಗಿದೆ ಹಾಗೂ ಅವರು ನವೆಂಬರ್‌ನಲ್ಲಿ ಬ್ರಿಟನ್‌ನಲ್ಲಿ ನಡೆಯಲಿರುವ ಸಿಒಪಿ26 ಹವಾಮಾನ ಬದಲಾವಣೆ ಶೃಂಗ ಸಮ್ಮೇಳನದ ಸಂಘಟನಾ ಸಮಿತಿಯ ಮುಖ್ಯಸ್ಥರೂ ಆಗಿರುತ್ತಾರೆ.

ಪ್ರಧಾನಿ ಬೊರಿಸ್ ಜಾನ್ಸನ್‌ರ ನಿಷ್ಠಾವಂತ ಬೆಂಬಲಿಗರಾಗಿರುವ 52 ವರ್ಷದ ಶರ್ಮ ಭಾರತದಲ್ಲಿ ಹುಟ್ಟಿದರು. ಅವರಿಗೆ 5 ವರ್ಷವಾಗಿದ್ದಾಗ ಅವರ ಕುಟುಂಬವು ದಕ್ಷಿಣ ಇಂಗ್ಲೆಂಡ್‌ನಲ್ಲಿರುವ ರೀಡಿಂಗ್‌ಗೆ ವಲಸೆ ಹೋಯಿತು.

ಬ್ಯಾಂಕಿಂಗ್ ಹಿನ್ನೆಲೆ ಹೊಂದಿರುವ ಅಲೋಕ್ ಶರ್ಮ 2010ರಲ್ಲಿ ರೀಡಿಂಗ್ ವೆಸ್ಟ್ ಸಂಸದೀಯ ಕ್ಷೇತ್ರದಿಂದ ಕನ್ಸರ್ವೇಟಿವ್ ಪಕ್ಷದಿಂದ ಸಂಸದರಾಗಿ ಮೊದಲು ಆಯ್ಕೆಗೊಂಡರು.

ಅವರು 2019ರಲ್ಲಿ ಅಂತರ್‌ರಾಷ್ಟ್ರಿಯ ನೆರವು ಸಚಿವರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News