ಸಾರ್ವಜನಿಕ ಕ್ಷೇತ್ರದ ಉದ್ಯಮಗಳ ಖಾಸಗೀಕರಣಕ್ಕೆ ಲಾಬಿ ನಡೆಯುತ್ತಿದೆ: ಕೇಂದ್ರ ಸಚಿವ ಆರ್.ಕೆ.ಸಿಂಗ್ ಆರೋಪ

Update: 2020-02-14 18:19 GMT

ಹೊಸದಿಲ್ಲಿ,ಫೆ.14: ಸಾರ್ವಜನಿಕ ಕ್ಷೇತ್ರದ ಉದ್ಯಮ (ಪಿಎಸ್‌ಯು)ಗಳ ವಿರುದ್ಧ ಲಾಬಿಯೊಂದು ನಡೆಯುತ್ತಿದ್ದು,ಅವುಗಳ ಖಾಸಗೀಕರಣಕ್ಕೆ ಪ್ರತಿಪಾದಿಸುತ್ತಿದೆ ಎಂದು ಕೇಂದ್ರ ವಿದ್ಯುತ್ ಸಚಿವ ಆರ್.ಕೆ.ಸಿಂಗ್ ಅವರು ಆರೋಪಿಸಿದ್ದಾರೆ.

ಛತ್ತೀಸ್‌ಗಡದ ರಾಯಪುರದಲ್ಲಿ ಎನ್‌ಟಿಪಿಸಿ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಈ ಆರೋಪವನ್ನು ಮಾಡಿದ್ದಾರೆ. ವಿದ್ಯುತ್ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಮಾತನಾಡುತ್ತಿದ್ದ ಅವರು ಶೀಘ್ರವೇ ತನ್ನ ಆರೋಪದ ವ್ಯಾಪ್ತಿಯನ್ನು ಇತರ ಕ್ಷೇತ್ರಗಳಿಗೂ ವಿಸ್ತರಿಸಿದರು. ಏರ್ ಇಂಡಿಯಾದ ಉದಾಹರಣೆಯನ್ನು ನೀಡಿದ ಅವರು,ಆದರೆ ಅದರ ಉದ್ದೇಶಿತ ಖಾಸಗೀಕರಣದ ಬಗ್ಗೆ ತಾನು ಮಾತನಾಡುವುದಿಲ್ಲ ಎಂದರು. ತಾನು ವಿದೇಶಗಳಿಗೆ ಪ್ರವಾಸ ಕೈಗೊಂಡಾಗೆಲ್ಲ ಸರಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆಗಳೇ ಹೆಚ್ಚಾಗಿ ಕಣ್ಣಿಗೆ ಬೀಳುತ್ತವೆ ಎಂದರು.

2020-21ನೇ ಸಾಲಿನಲ್ಲಿ ಕೆಲವು ಪಿಎಸ್‌ಯುಗಳಲ್ಲಿನ ತನ್ನ ಪಾಲು ಬಂಡವಾಳವನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಮಾರಾಟ ಮಾಡುವ ಮೂಲಕ ಸುಮಾರು 2.1ಲ.ಕೋ.ರೂ.ಗಳನ್ನು ಕ್ರೋಡೀಕರಿಸಲು ಎನ್‌ಡಿಎ ಸರಕಾರವು ಉದ್ದೇಶಿಸಿರುವ ಸಂದರ್ಭದಲ್ಲಿಯೇ ಸಿಂಗ್ ಅವರ ಈ ಆರೋಪ ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News