ವಿರಾಟ್ ಕೊಹ್ಲಿಗೆ ಸಂತಸ

Update: 2020-02-14 18:31 GMT

ಹೊಸದಿಲ್ಲಿ, ಫೆ.14: ಇಂಡಿಯನ್ ಪ್ರೀಮಿಯರ್ ಲೀಗ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ನೂತನ ಲಾಂಛನವನ್ನು ನೋಡಿ ವಿರಾಟ್ ಕೊಹ್ಲಿ ರೋಮಾಂಚನಗೊಂಡಿದ್ದಾರೆ. ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ ನಾಯಕ ಕೊಹ್ಲಿ ಹೊಸ ಲೋಗೊದೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘‘ಲೋಗೊದ ಕೆಲಸ ಹೇಳುವುದು. ನಮ್ಮ ನೂತನ ಆರ್‌ಸಿಬಿ ಲೋಗೊವನ್ನು ಟ್ವೀಟ್‌ನಲ್ಲಿ ನೋಡಿ ರೋಮಾಂಚನಗೊಂಡೆ. ಇದು ನಮ್ಮ ಆಟಗಾರರ ಸವಾಲಿನ ಮನೋಭಾವವನ್ನು ಸಾಕಾರಗೊಳಿಸುತ್ತದೆ. 2020ರ ಐಪಿಎಲ್ ಕಾಯಲು ಸಾಧ್ಯವಿಲ’’ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಈ ವರ್ಷದ ಅತ್ಯಂತ ಶ್ರೀಮಂತ ಟ್ವೆಂಟಿ-20 ಲೀಗ್ ಐಪಿಎಲ್ 13ನೇ ಆವೃತ್ತಿಯಾಗಿದ್ದು ,ಮೂರು ಸ್ಥಾಪಿತ ಸದಸ್ಯರುಗಳ ಪೈಕಿ ಆರ್‌ಸಿಬಿ ಪ್ರಶಸ್ತಿ ಗೆಲ್ಲದ ಏಕೈಕ ತಂಡವಾಗಿದೆ. 2016ರ ಆವೃತ್ತಿಯ ಐಪಿಎಲ್‌ನಲ್ಲಿ ಫೈನಲ್ ತಲುಪಲು ಶಕ್ತವಾಗಿತ್ತು. ಆ ಬಳಿಕ ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.

ಇದೀಗ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಫೆಬ್ರವರಿ 21 ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಝಿಲ್ಯಾಂಡ್‌ನ್ನು ಎದುರಿಸಲು ತಯಾರಿ ನಡೆಸುತ್ತಿದ್ದಾರೆ.

ನ್ಯೂಝಿಲ್ಯಾಂಡ್ ಕ್ರಿಕೆಟ್ ಪ್ರವಾಸದಲ್ಲಿ ಭಾರತ ತಂಡ 5 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 5-0 ಅಂತರದಿಂದ ಗೆದ್ದುಕೊಂಡಿದೆ. ಆದರೆ 3 ಪಂದ್ಯಗಳ ಏಕದಿನ ಸರಣಿಯನ್ನು 0-3 ಅಂತರದಿಂದ ಸೋಲುಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News