"ಆಸ್ಕರ್ ಗೆದ್ದ 'ಪ್ಯಾರಸೈಟ್' ಚಿತ್ರದ ಕಥೆ ನಮ್ಮ ಸಿನೆಮಾದ್ದು": ಕೋರ್ಟ್ ಮೆಟ್ಟಿಲೇರಲು ಮುಂದಾದ ತಮಿಳು ನಿರ್ಮಾಪಕ

Update: 2020-02-15 11:13 GMT

ಚೆನ್ನೈ: ದಕ್ಷಿಣ ಕೊರಿಯಾದ ಚಿತ್ರ 'ಪ್ಯಾರಸೈಟ್' ನಾಲ್ಕು ಆಸ್ಕರ್ ಪ್ರಶಸ್ತಿ ಬಾಚಿಕೊಂಡ ಬೆನ್ನಲ್ಲೇ ವಿವಾದವೊಂದು ಹುಟ್ಟಿಕೊಂಡಿದೆ. ಈ ಚಿತ್ರ 1999ರಲ್ಲಿ ತೆರೆಕಂಡ `ಮಿನ್ಸಾರ ಕಣ್ಣ' ಎಂಬ ತಮಿಳು ಚಿತ್ರವನ್ನು ಹೋಲುತ್ತಿದೆ  ಎಂಬ ಆರೋಪ ಕೇಳಿ ಬಂದಿದ್ದು, ಈ ಚಿತ್ರದ ಹಕ್ಕುಗಳನ್ನು ಹೊಂದಿರುವ ನಿರ್ಮಾಪಕ ಪಿ ಎಲ್ ತೇನಪ್ಪನ್ ಅವರು 'ಪ್ಯಾರಸೈಟ್' ನಿರ್ಮಾಪಕರಿಂದ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲು ಹತ್ತಲು ನಿರ್ಧರಿಸಿದ್ದಾರೆ.

ಅಂತಾರಾಷ್ಟ್ರೀಯ ವಕೀಲರ ಸಹಾಯದಿಂದ ಸೋಮವಾರ ಅಥವಾ ಮಂಗಳವಾರ ಮೊಕದ್ದಮೆ ದಾಖಲಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ವಿಜಯ್, ರಂಭಾ, ಮೋನಿಕಾ ಕ್ಯಾಸ್ಟಲಿನೋ ಹಾಗೂ ಖುಷ್ಬೂ ಪ್ರಮುಖ ತಾರಾಗಣದಲ್ಲಿರುವ 'ಮಿನ್ಸಾರ ಕಣ್ಣ' ಚಲನಚಿತ್ರವನ್ನು ಕೆ ಎಸ್ ರವಿಕುಮಾರ್ ನಿರ್ದೇಶಿಸಿದ್ದರೆ, ಚಿತ್ರ ಕೆ ಆರ್ ಜಿ ಮೂವೀಸ್ ಇಂಟರನ್ಯಾಷನಲ್ ಲಾಂಛನದಡಿಯಲ್ಲಿ ನಿರ್ಮಾಣಗೊಂಡಿತ್ತು.

ನಾಯಕ ತಾನು ಪ್ರೇಮಿಸುತ್ತಿದ್ದ ಯುವತಿಯನ್ನು ತನ್ನವಳಾಗಿಸಲು ತನ್ನ ಕುಟುಂಬದ ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲಾ ಸದಸ್ಯರೂ ಆಕೆಯ ಮನೆಯಲ್ಲಿ ಆಳುಗಳಾಗುವಂತೆ ಮಾಡುವ ಕಥಾವಸ್ತುವನ್ನು ಈ ಚಿತ್ರ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News