ಪಾಕ್ ಪ್ರಧಾನಿ ಇಮ್ರಾನ್ ಖಾನ್ ಜೊತೆ ಔತಣ ಸವಿದರೇ ಪ್ರಧಾನಿ ಮೋದಿ?

Update: 2020-02-15 14:10 GMT

ಹೊಸದಿಲ್ಲಿ: 'ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಜೊತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಔತಣ ಸವಿಯುತ್ತಿದ್ದಾರೆ' ಎನ್ನುವ ಶೀರ್ಷಿಕೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಒಂದು ವೈರಲ್ ಆಗುತ್ತಿದೆ. ಚಿತ್ರದಲ್ಲಿ ಮೋದಿ ಹಸಿರು ಟೋಪಿ ಧರಿಸಿರುವುದೂ ಕಾಣಿಸುತ್ತದೆ.

ಈ ತಿರುಚಿದ ಚಿತ್ರಕ್ಕೆ ಒಂದು ಶೀರ್ಷಿಕೆ ಕೂಡ ಇದೆ. "ಪಾಕಿಸ್ತಾನದ ಬಿರಿಯಾನಿ ಹೇಗಿತ್ತೆಂದು ಅವರನ್ನು (ಮೋದಿ) ಕೇಳಿ'' ಎಂದು ಬರೆಯಲಾಗಿದೆ. ಐನೂರಕ್ಕೂ ಹೆಚ್ಚು ಮಂದಿ ಈ ಪೋಸ್ಟ್ ಲೈಕ್ ಮಾಡಿದ್ದು ನೂರಾರು ಮಂದಿ ರಿಟ್ವೀಟ್ ಮಾಡಿದ್ದಾರೆ. ಅನುರಾಗ್ ಕಶ್ಯಪ್ ಕೂಡ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದರು.

ವಾಸ್ತವವೇನು?

ಇಮ್ರಾನ್ ಅವರು ತಮ್ಮ ಎರಡನೇ ಪತ್ನಿ ರೆಹಮ್ ಖಾನ್ ಜತೆ 2015ರಲ್ಲಿ ಔತಣ ಸವಿಯುತ್ತಿರುವ ಫೋಟೊ ಇದಾಗಿದೆ. 5 ವರ್ಷ ಹಳೆಯ ಫೋಟೊವನ್ನು ತಿರುಚಿ ಪ್ರಧಾನಿ ಮೋದಿಯವರ ಫೋಟೊವನ್ನು ಫೋಟೊಶಾಪ್ ಮಾಡಿ ಈ ಕೃತ್ಯ ಎಸಗಲಾಗಿದೆ.

ಕಳೆದ ವರ್ಷ ಕೂಡ ಇದೇ ಫೋಟೋ ತಿರುಚಿ ರೆಹಮ್ ಖಾನ್ ಸ್ಥಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಫೋಟೋ ಅಂಟಿಸಿ ``ಇಮ್ರಾನ್ ಖಾನ್ ಜತೆ ಯಾರು ಊಟ ಮಾಡುತ್ತಿದ್ದಾರೆ ನೋಡಿ'' ಎಂಬ ಶೀರ್ಷಿಕೆ ನೀಡಲಾಗಿತ್ತು.

ಕೃಪೆ: theprint.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News