ನ್ಯೂಝಿಲ್ಯಾಂಡ್ ಇಲೆವೆನ್ 235 ರನ್‌ಗೆ ಆಲೌಟ್

Update: 2020-02-15 18:37 GMT

ಹ್ಯಾಮಿಲ್ಟನ್, ಫೆ.15: ನ್ಯೂಝಿಲ್ಯಾಂಡ್ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಹಾಗೂ ಮುಹಮ್ಮದ್ ಶಮಿ ಅತ್ಯುತ್ತಮ ಬೌಲಿಂಗ್‌ನ ಮೂಲಕ ಎರಡನೇ ದಿನದಾಟದಲ್ಲಿ ಮಿಂಚಿದರು. ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು.

 ನ್ಯೂಝಿಲ್ಯಾಂಡ್ ಮೊದಲ ಇನಿಂಗ್ಸ್‌ನಲ್ಲಿ 74.4 ಓವರ್‌ಗಳಲ್ಲಿ 235 ರನ್‌ಗೆ ಆಲೌಟಾಗಿದೆ. ಬುಮ್ರಾ(2-18, 11 ಓವರ್‌ಗಳು) ಹಾಗೂ ಶಮಿ(3-17, 10 ಓವರ್‌ಗಳು)ವಾತಾವರಣವನ್ನು ಚೆನ್ನಾಗಿ ಬಳಸಿಕೊಂಡರು. ಉಮೇಶ್ ಯಾದವ್(2-49, 13 ಓವರ್)ಹಾಗೂ ನವದೀಪ ಸೈನಿ(2-58, 15 ಓವರ್)ಹೆಚ್ಚು ಓವರ್‌ಗಳ ಬೌಲಿಂಗ್ ಮಾಡಿದರು. ಆದರೆ, ಈ ಇಬ್ಬರು ಬುಮ್ರಾ ಹಾಗೂ ಶಮಿ ಅವರಷ್ಟು ಪರಿಣಾಮಕಾರಿ ಪ್ರದರ್ಶನ ನೀಡಲಿಲ್ಲ. ಈ ಇಬ್ಬರು ಬೌಲರ್‌ಗಳು ತಮ್ಮ ಸ್ಪೆಲ್‌ಗಳ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗೆ ಸವಾಲೊಡ್ಡಿದರು. ನ್ಯೂಝಿಲ್ಯಾಂಡ್‌ನ ಪರ ಹೆನ್ರಿ ಕೂಪರ್ ಸರ್ವಾಧಿಕ ಸ್ಕೋರ್(70,68 ಎಸೆತ)ಗಳಿಸಿದರು. ರವೀಂದ್ರ(34), ನಾಯಕ ಮಿಚೆಲ್(32) ಹಾಗೂ ಬ್ರೂಸ್(31)ಎರಡಂಕೆಯ ಸ್ಕೋರ್ ಗಳಿಸಿದರು.

 2ನೇ ದಿನದಾಟದಂತ್ಯಕ್ಕೆ ಪೃಥ್ವಿ ಶಾ(ಔಟಾಗದೆ 35,25 ಎಸೆತ)ಹಾಗೂ ಮಾಯಾಂಕ್ ಅಗರ್ವಾಲ್(ಔಟಾಗದೆ 23, 17 ಎಸೆತ)ಕ್ರೀಸ್ ಕಾಯ್ದುಕೊಂಡಿದ್ದು, ಭಾರತ 2ನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 53 ರನ್ ಗಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News