​24 ವರ್ಷದ ದಾಖಲೆ ಹಿಂದಿಕ್ಕಿದ ‘ಅಲಾ ವೈಕುಂಠಾಪುರಮುಲೋ’

Update: 2020-02-16 06:26 GMT

 ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹೊಸ ಚಿತ್ರ ‘ಅಲಾ ವೈಕುಂಠಾಪುರಮುಲೋ’ ಜಾಗತ್ತಿನ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರ ತೆಲುಗು ರಾಜ್ಯದಲ್ಲಿ ಬಾಹುಬಲಿ ಹೊರತುಪಡಿಸಿ ಉಳಿದ ಚಿತ್ರಗಳಿಗೆ ಹೋಲಿಸಿದರೆ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದೆ. ಫ್ಯಾಮಿಲಿ ಎಂಟರ್‌ಟೈನರ್ ಆಗಿರುವ ಈ ಚಿತ್ರ ಜಗತ್ತಿನಾದ್ಯಂತ ಎರಡು ವಾರಗಳಲ್ಲಿ 230 ಕೋಟಿ ರೂಪಾಯಿ ಬಾಚಿಕೊಂಡಿದೆ. ಅಮೆರಿಕದಲ್ಲಿ 3 ದಶಲಕ್ಷ ಡಾಲರ್‌ಗೂ ಹೆಚ್ಚ ಗಳಿಸಿದ ದಕ್ಷಿಣ ಭಾರತದ 8ನೇ ಚಿತ್ರವಾಗಿ ಇದು ಹೊರ ಹೊಮ್ಮಿದ್ದರೆ, ಪೂಜಾ ಹೆಗ್ಡೆ ನಟನೆಯ ಈ ಚಿತ್ರ ತಮಿಳು ಚಿತ್ರಗಳಲ್ಲೇ ಸಾರ್ವಕಾಲಿಕವಾಗಿ ಅತ್ಯಧಿಕ ಹಣ ಗಳಿಸಿದ ಚಿತ್ರವಾಗಿದೆ. ಈ ನಡುವೆ ‘ಅಲಾ ವೈಕುಂಠಾಪುರಮುಲೋ’ ತನ್ನ ಹಿರಿಮೆಗೆ ಇನ್ನೊಂದು ಗರಿ ಸಿಕ್ಕಿಸಿಕೊಂಡಿದೆ. ಈ ಚಿತ್ರ ಹೈದರಾಬಾದ್‌ನ ಜನಪ್ರಿಯ ಸಂಧ್ಯಾ 35 ಎಂಎಂ ಥಿಯೇಟರ್‌ನಲ್ಲಿ ಕಡಿಮೆ ದಿನಗಳಲ್ಲಿ ಹೆಚ್ಚು ಗಳಿಸಿದ ಕೆ. ರಾಘವೇಂದ್ರ ರಾವ್ ಅವರ 1996ರ ಸಂಗೀತ ಪ್ರಧಾನ ರೊಮ್ಯಾಂಟಿಕ್ ಚಿತ್ರ ‘ಪೆಲ್ಲಿ ಸಂದಡಿ’ ಚಿತ್ರವನ್ನು ಹಿಂದಿಕ್ಕಿದೆ. ಶ್ರೀಕಾಂತ್ ರಾವಲಿ ಹಾಗೂ ದೀಪ್ತಿ ಭಟ್ನಾಗರ್ ತಾರಾಗಣದ ‘ಪೆಲ್ಲಿ ಸಂದಡಿ’ ಚಿತ್ರ ಈ ಥಿಯೇಟರ್‌ನಲ್ಲಿ 232 ದಿನಗಳ ಪ್ರದರ್ಶನ ಕಂಡು 98 ಲಕ್ಷ ಗಳಿಸಿತ್ತು. ಆದರೆ, ಅಲ್ಲು ಅರ್ಜನ್ ಅವರ ಚಿತ್ರ ಕೇವಲ 29 ದಿನಗಳಲ್ಲೇ ಈ ಗಳಿಕೆಯನ್ನು ಹಿಂದಿಕ್ಕಿದೆ ಹಾಗೂ 24 ವರ್ಷಗಳ ದಾಖಲೆಯನ್ನು ಪುಡಿಗಟ್ಟಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಹಾಗೂ ಪೂಜಾ ಹೆಗ್ಡೆ ಅವರೊಂದಿಗೆ ತಬು, ಸುಶಾಂತ್, ನವದೀಪ್, ಜಯರಾಮ್, ಸಮುದ್ರಕಣಿ, ರಾಜೇಂದ್ರ ಪ್ರಸಾದ್, ರಾಹುಲ್ ರಾಮಕೃಷ್ಣ, ವೆನ್ನೇಲಾ ಕಿಶೋರ್, ಬ್ರಹ್ಮಜಿ ಹಾಗೂ ಸುನಿಲ್ ನಟಿಸಿದ್ದಾರೆ. ಚಿತ್ರಕ್ಕೆ ಎ್. ಥಾಮನ್ ಅವರ ಸಂಗೀತ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News