ಬಡ್ತಿಗಳಲ್ಲಿ ಮೀಸಲಾತಿ: ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಭೀಮ್ ಆರ್ಮಿಯಿಂದ ಪ್ರತಿಭಟನಾ ಜಾಥಾ

Update: 2020-02-16 15:11 GMT

ಹೊಸದಿಲ್ಲಿ,ಫೆ.16: ಸರಕಾರಿ ಸೇವೆಗಳಲ್ಲಿ ಬಡ್ತಿಗಳಲ್ಲಿ ಮೀಸಲಾತಿಯನ್ನು ಒದಗಿಸಲು ರಾಜ್ಯ ಸರಕಾರಗಳು ಬದ್ಧವಾಗಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪಿನ ವಿರುದ್ಧ ಭೀಮ್ ಆರ್ಮಿಯ ಭಾರೀ ಸಂಖ್ಯೆಯ ಕಾರ್ಯಕರ್ತರು ರವಿವಾರ ಇಲ್ಲಿ ಪ್ರತಿಭಟನಾ ಜಾಥಾ ನಡೆಸಿದರು.

ಮಂಡಿ ಹೌಸ್‌ನಿಂದ ಜಂತರ್ ಮಂತರ್‌ವರೆಗೆ ನಡೆದ ಜಾಥಾದ ನೇತೃತ್ವವನ್ನು ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಝಾದ್ ಅವರು ವಹಿಸಿದ್ದರು. ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಲು ಸರಕಾರದ ಮೇಲೆ ಒತ್ತಡವನ್ನು ಹೇರಲು ಫೆ.23ರಂದು ಭಾರತ ಬಂದ್‌ಗೂ ಅವರು ಕರೆ ನೀಡಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪು ಸಮಾನತೆಯ ಹಕ್ಕಿನ ಸಂವಿಧಾನದ ಭರವಸೆಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಭೀಮ್ ಆರ್ಮಿಯ ವಕ್ತಾರ ಹರ್ಜೀತ್ ಸಿಂಗ್ ಭಟ್ಟಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News