ಒತ್ತಡಕ್ಕೊಳಗಾಗಿ ಅಮೆರಿಕದ ಜೊತೆ ಮಾತುಕತೆಗೆ ಸಿದ್ಧನಿಲ್ಲ: ಇರಾನ್ ಘೋಷಣೆ

Update: 2020-02-16 16:15 GMT

  ದುಬೈ,ಫೆ.16: ತನ್ನ ದೀರ್ಘಕಾಲದ ವೈರಿ ಅಮೆರಿಕದ ಜೊತೆ ಯಾವುದೇ ರೀತಿಯ ಒತ್ತಡದಲ್ಲಿ ಮಾತುಕತೆ ನಡೆಸಲು ತಾನು ಸಿದ್ಧನಿಲ್ಲವೆಂದು ಇರಾನ್ ಅಧ್ಯಕ್ಷ ಹಸ್ಸನ್ ರೂಹನಿ ತಿಳಿಸಿದ್ದಾರೆ. ರವಿವಾರ ಟಿವಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಅವರು ಮಧ್ಯಪ್ರಾಚ್ಯದಲ್ಲಿ ಭದ್ರತೆಯನ್ನು ಸ್ಥಾಪಿಸಬೇಕಾದರೆ ಟೆಹರಾನ್‌ನ ನೆರವು ಅತ್ಯಗತ್ಯವೆಂದು ಅವರು ಪ್ರತಿಪಾದಿಸಿದ್ದಾರೆ.

 ‘‘ ಒತ್ತಡಕ್ಕೊಳಗಾಗಿ ಇರಾನ್ ಯಾವತ್ತೂ ಮಾತುಕತೆಯಲ್ಲಿ ಪಾಲ್ಗೊಳ್ಳದು. ಅಮೆರಿಕದ ಒತ್ತಡಕ್ಕೆ ನಾವು ಎಂದಿಗೂ ಮಣಿಯಲಾರೆವು. ಇರಾನ್‌ನೆಡೆಗೆ ಗರಿಷ್ಠ ಒತ್ತಡವನ್ನು ಹೇರುವ ಅಮೆರಿಕದ ಯತ್ನ ವಿಫಲವಾಗಲಿದೆ’’ ಎಂದು ರೂಹಾನಿ ತಿಳಿಸಿದ್ದಾರೆ..

  ಮಧ್ಯಪ್ರಾಚ್ಯ ಹಾಗೂ ಪರ್ಶಿಯನ್ ಕೊಲ್ಲಿಯಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಇರಾನ್‌ನ ನೆರವಿಲ್ಲದೆ ಶಾಂತಿ ಹಾಗೂ ಸ್ಥಿರತೆಯನ್ನು ಸ್ಥಾಪಿಸಲು ಸಾಧ್ಯವಿಲ್ಲವೆಂದು ರೂಹಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News