ಶ್ರೀಲಂಕಾ ನೌಕಾಪಡೆಯಿಂದ 11 ಭಾರತೀಯ ಬೆಸ್ತರ ಬಂಧನ

Update: 2020-02-16 16:19 GMT
ಸಾಂದರ್ಭಿಕ ಚಿತ್ರ

ಕೊಲಂಬೊ,ಫೆ.16: ಶ್ರೀಲಂಕಾದ ಸಾಗರಪ್ರದೇಶದಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದ 11 ಮಂದಿ ಭಾರತೀಯ ಮೀನುಗಾರರನ್ನು ಆ ದೇಶದ ನೌಕಾಪಡೆ ಬಂಧಿಸಿದೆ.

  ಶ್ರೀಲಂಕಾದ ಅಲನತೀವು ದ್ವೀಪದ ಉತ್ತರ ಕರಾವಳಿಯಲ್ಲಿ ಭಾರತೀಯ ಮೀನು ಗಾರರನ್ನು ಬಂಧಿಸಲಾಗಿದ್ದು, ಅವರ ಟ್ರಾಲರ್‌ದೋಣಿಗಳನ್ನು ನೌಕಾಪಡೆಯ ವಶಕ್ಕೆ ತೆಗೆದುಕೊಂಡಿದೆಯೆಂದು ಶ್ರೀಲಂಕಾದ ನೌಕಾದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ‘‘ಮೀನುಗಾರರು ಮತ್ತು ಅವರ ಟ್ರಾಲರ್ ದೋಣಿಗಳನ್ನು ಕರಾವಳಿ ಸಂರಕ್ಷಣಾ ಇಲಖೆಯ ಮೂಲಕ ಜಾಫ್ನಾದ ಮೀನುಗಾರಿಕಾ ನಿರ್ದೇಶನಾಲಯಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನ್ನ ನಿರಂತರವಾದ ಕಣ್ಗಾವಲಿನಿಂದಾಗಿ ಶ್ರೀಲಂಕಾದ ಜಲಪ್ರದೇಶದಲ್ಲಿ ಅಕ್ರಮ ಮೀನುಗಾರಿಕೆ ನಡೆಸುತ್ತಿರುವ ಭಾರತೀಯ ಮೀನುಗಾರಿಕಾ ದೋಣಿಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಸಿಂಹಳ ನೌಕಾಪಡೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News