ಡೈಮಂಡ್ ಪ್ರಿನ್ಸೆಸ್: ಕೊರೋನ ಪೀಡಿತರ ಸಂಖ್ಯೆ 355ಕ್ಕೇರಿಕೆ

Update: 2020-02-16 16:21 GMT

ಟೋಕಿಯೊ,ಫೆ.16: ಜಪಾನ್‌ನ ಯೊಕೋಹಾಮ ಬಂದರಿನಲ್ಲಿ ದಿಗ್ಬಂಧನದಲ್ಲಿರಿಸಲಾದ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ ರವಿವಾರ 355ಕ್ಕೇರಿದೆ.

  ‘‘ಈವರೆಗೆ ಹಡಗಿನಲ್ಲಿರುವ 1219 ವ್ಯಕ್ತಿಗಳನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ 355 ಮಂದಿಗೆ ಕೊರೋನಾ ಸೋಂಕು ತಗಲಿರುವುದು ದೃಢಪಟ್ಟಿದೆ ’’ಎಂದು ಜಪಾನ್‌ನ ಆರೋಗ್ಯ ಸಚಿವ ಕತ್ಸುನೊಬು ಕಾಟೊ ತಿಳಿಸಿದ್ದಾರೆ

 3500 ಮಂದಿ ಪ್ರಯಾಣಿಕರು ಹಾಗೂ ಸಿಬ್ಬಂದಿಯಿರುವ ಡೈಮಂಡ್ ಪ್ರಿನ್ಸೆಸ್ ಹಡಗು ಫೆಬ್ರವರಿ 3ರಂದು ಯೊಕೊಹಾಮ ಬಂದರನ್ನು ಪ್ರವೇಶಿಸಿದಾಗಿನಿಂದ, ಈವರೆಗೆ ಒಟ್ಟು 355 ಮಂದಿ ಕೊರೊನಾ ವೈರಸ್ ಪೀಡಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News