ಕರೆನ್ಸಿಯಿಂದಲೂ ಕೊರೋನ ಹರಡುವ ಭೀತಿ: ನೋಟುಗಳನ್ನು ಸೋಂಕುಮುಕ್ತಗೊಳಿಸುವ ಕಾರ್ಯಾಚರಣೆ ಆರಂಭ

Update: 2020-02-16 16:24 GMT

  ಬೀಜಿಂಗ್,ಫೆ.16: 1600ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿರುವ ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ತಡೆಯಲು ಸಮರೋಪಾದಿಯ ಕಾರ್ಯಾಚರಣೆ ನಡೆಸುತ್ತಿರುವ ಚೀನಾವು ಬಳಕೆಯಾದ ಬ್ಯಾಂಕ್‌ನೋಟುಗಳನ್ನು ಸೋಂಕುಮುಕ್ತಗೊಳಿಸಲಾರಂಭಿಸಿದೆ.

   ಚೀನಾದ ಬ್ಯಾಂಕುಗಳು ಚೀನಾದ ಕರೆನ್ಸಿಯುವಾನ್‌ನ ನೋಟುಗಳನ್ನು ಮರುಚಲಾವಣೆಗೆ ಬಿಡುಗಡೆಗೊಳಿಸುವ ಮುನ್ನ ಅಲ್ಟ್ರಾವಯೊಲೆಟ್ ಬೆಳಕು ಅಥವಾ ಅಧಿಕ ತಾಪಮಾನಕ್ಕೆ ಒಡ್ಡುವ ಮೂಲಕ ಸೋಂಕುಮುಕ್ತಗೊಳಿಸುತ್ತಿವೆ.

ಚೀನಾವು ಸಾರ್ವಜನಿಕ ಸ್ಥಳಗಳನ್ನು ಸೋಂಕಮುಕ್ತಗೊಳಿಸುವ ಕಾರ್ಯಾಚರಣೆ ನಡೆಸುತ್ತಿದೆ ಹಾಗೂ ಜನರ ನಡುವೆ ಸಂಪರ್ಕವುಂಟಾಗುವುದನ್ನು ಸಾಧ್ಯವಿದ್ದಷ್ಟು ಕಡಿಮೆಗೊಳಿಸಿದೆ. ಕಚೇರಿ, ಕಟ್ಟಡಗಳ ಎಲಿವೇಟರ್‌ಗಳಲ್ಲಿ ಟಿಶ್ಯೂ ಪೇಪರ್‌ಗಳ ಪೊಟ್ಟಣಗಳನ್ನು ಅಳವಡಿಸಲಾಗಿದ್ದು, ಎಲಿವೇಟರ್‌ನ ಗುಂಡಿಯನ್ನು ಅದುಮುವ ಂತೆ ಉತ್ತೇಜಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News