ಮಾಲಿಯಲ್ಲಿ 40 ಮಂದಿಯ ನರಮೇಧ

Update: 2020-02-16 16:33 GMT
ಸಾಂದರ್ಭಿಕ ಚಿತ್ರ

ಬಮಾಕೋ,ಫೆ.16: ಪಶ್ಚಿಮ ಆಫ್ರಿಕದ ರಾಷ್ಟ್ರವಾದ ಮಾಲಿಯ ಗ್ರಾಮವೊಂದ ್ಚಮೇಲೆ ದಾಳಿ ನಡೆಸಿದ ಬಂಧೂಕುದಾರಿಗಳ ಗುಂಪೊಂದು ಮನಬಂದಂತೆ ಗುಂಡು ಹಾರಿಸಿ 40ಕ್ಕೂ ಅಧಿಕ ಮಂದಿಯನ್ನು ಹತ್ಯೆಗೈದಿವೆ.

ಬಂದೂಕುಧಾರಿಗಳು ಕೇಂದ್ರ ಮೊಪ್ಟಿ ಪ್ರಾಂತದ ಬ್ಯಾಂಸ್ ವೃತ್ತದಲ್ಲಿರುವ ಒಗೊಸ್ಸಾಗೊವ್ ಗ್ರಾಮದ ಮೇಲೆ ಶುಕ್ರವಾರ ಮುಂಜಾನೆ ದಾಳಿ ನಡೆಸಿ ಹತ್ಯಾಕಾಂಡವೆಸಗಿದ್ದಾರೆಂದು ಸರಕಾರದ ಮೂಲಗಳು ತಿಳಿಸಿವೆ. ಮಾಲಿ ಸರಕಾರವು ದಾಳಿಯನ್ನು ಖಂಡಿಸಿದ್ದು, ಆ ಬಗ್ಗೆ ತನಿಖೆ ನಡೆಸುವುದಾಗಿ ಮತ್ತು ಹತ್ಯಾಕಾಂಡದ ಹಿಂದಿರುವ ಸೂತ್ರಧಾರಿಗಳನ್ನು ಕಾನೂನಿನ ಕ್ರಮಕ್ಕೊಳಪಡಿಸುವುದಾಗಿ ತಿಳಿಸಿದೆ.

ನರಮೇಧ ನಡೆದ ಗ್ರಾಮಕ್ಕೆ ಕ್ಷಿಪ್ರ ಪ್ರತಿಕ್ರಿಯಾ ತಂಡಗಳನ್ನು ಕಳುಹಿಸಿರುವುದಾಗಿ ಮಾಲಿಯಲ್ಲಿನ ವಿಶ್ವಸಂಸ್ಥೆಯ ಮಿಶನ್ ತಿಳಿಸಿದೆ. ಉಗ್ರರ ಗುಂಪು ನಡೆಸಿದ ಗುಂಂಡು ಹಾರಾಟದಲ್ಲಿ ಹಲವರಿಗೆ ಗಾಯಗಳಾಗಿರುವುದಾಗಿಯೂ ಅದು ಹೇಳಿದೆ. ಆ ಪ್ರದೇಶದಲ್ಲಿ ಇನ್ನಷ್ಟು ದಾಳಿಗಳು ನಡೆಯುವುದನ್ನು ತಡೆಗಟ್ಟಲು ಮತ್ತು ಗಾಯಾಳುಗಳನ್ನು ತೆರವುಗೊಳಿಸಲು ಸರಕಾರಿ ಪಡೆಗಳಿಗೆ ವೈಮಾನಿಕ ನೆರವನ್ನು ಒದಗಿಸಿರುವುದಾಗಿ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News