ಬಗ್ದಾದ್: ಅಮೆರಿಕ ರಾಯಭಾರಿ ಕಚೇರಿ ಸಮೀಪ ಮತ್ತೆ ಸರಣಿ ರಾಕೆಟ್ ದಾಳಿ

Update: 2020-02-16 16:34 GMT

ಬಾಗ್ದಾದ್,ಫೆ.16: ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಸಮೀಪ ರವಿವಾರ ಹಲವಾರು ರಾಕೆಟ್‌ಗಳು ಅಪ್ಪಳಿಸಿವೆ ಎಂದು ಅಮೆಅರಿಕದ ಮಿಲಿಟರಿ ಮೂಲಗಳು ತಿಳಿಸಿವೆ. ಆದರೆ ದಾಳಿಯಲ್ಲಿ ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ತಕ್ಷಣವೇ ವರದಿಯಾಗಿಲ್ಲ. ಅಮೆರಿಕ ರಾಯಭಾರಿ ಕಚೇರಿ ಬಳಿ ಹಲವಾರು ಪ್ರಬಲ ಸ್ಫೋಟಗಳು ನಡೆದ ಸದ್ದು ಕೇಳಿಬಂದಿದ್ದಾಗಿ ಅಂತರ್‌ರಾಷ್ಟ್ರೀಯ ವಾರ್ತಾ ಸಂಸ್ಥೆ ವಾರ್ತಾ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.

ಬಗ್ದಾದ್‌ನಲ್ಲಿರುವ ಬಿಗುಭದ್ರತೆಯ ಗ್ರೀನ್‌ರೆನ್‌ನಲ್ಲಿರುವ ಅಮೆರಿಕನ್ ರಾಯಭಾರಿ ಕಚೇರಿಯ ಬಳಿ ಸರಣಿ ರಾಕೆಟ್ ದಾಳಿಗಳು ನಡೆದ ಬಳಿಕ ವಾಯುಪಡೆಯ ವಿಮಾನಗಳು ಆಗಸದಲ್ಲಿ ಗಸ್ತು ತಿರುಗುತ್ತಿರುವುದು ಕಂಡುಬಂದಿತೆಂದು ವರದಿಗಳು ತಿಳಿಸಿವೆ.

ಅಮೆರಿಕ ರಾಯಭಾರಿ ಕಚೇರಿ ಅಥವಾ ಇರಾಕ್‌ನಾದ್ಯಂತ 5200ಕ್ಕೂ ಅಧಿಕ ಅಮೆರಿಕ ಪಡೆಗಳನ್ನು ನಿಯೋಜಿಸಲಾಗಿರುವ ನೆಲೆಗಳ ಮೇಲೆ ಕಳೆದ ಅಕ್ಟೋಬರ್‌ನಿಂದೀಚೆಗೆ ನಡೆದರುವ 19ನೇ ದಾಳಿ ಇದಾಗಿದೆ.

   ಈ ದಾಳಿಗಳ ಹಿಂದೆ ಇರಾಕ್‌ನ ಭದ್ರತಾಪಡೆಗಳ ಜೊತೆ ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಇರಾನ್ ಬೆಂಬಲಿತ ಹಾಶೆಲ್ ಅಲ್ ಶಾಬಿ ಗುಂಪಿನ ಕೈವಾಡವಿದೆಯೆಂದು ಅಮೆರಿಕವು ಆರೋಪಿಸಿದೆ.

 ಕಳೆದ ಡಿಸೆಂಬರ್ ಅಂತ್ಯದಲ್ಲಿ ಶಂಕಿತ ಇರಾನ್ ಬೆಂಬಲಿತ ಗುಂಪಿನ ಡ್ರೋನ್ ದಾಳಿಯೊಂದರಲ್ಲಿ ಅಮೆರಿಕದ ಕಂಟ್ರಾಕ್ಟರ್ ಒಬ್ಬಾತ ಮೃತಪಟ್ಟ ಘಟನೆಗೆ ಪ್ರತೀಕಾರವಾಗಿ ಅಮೆರಿಕವು ಬಗ್ದಾದ್ ವಿಮಾನಿಲ್ದಾಣದ ಬಳಿಕ ಇರಾನ್‌ನ ಉನ್ನತ ಸೇನಾಧಿಕಾರಿ ಜನರಲ್ ಖಾಸೀಂ ಸುಲೈಮಾನಿ ಸಹಿತ ಇಬ್ಬರು ಉನ್ನತ ಸೇನಾಧಿಕಾರಿಗಳನ್ನು ವೈಮಾನಿಕ ದಾಳಿಯಲ್ಲಿ ಹತ್ಯೆಗೈದಿತ್ತು.

 ಈ ದಾಳಿಯ ಬಳಿಕ ಇರಾನ್ ಬೆಂಬಲಿತ ಹಾಶೆದ್ ಗುಂಪು ಅಮೆರಿಕದ ವಿರುದ್ಧ ಪ್ರತೀಕಾರ ತೀರಿಸುವುದಾಗಿ ಪ್ರತಿಜ್ಞೆ ಮಾಡಿದ್ದವು ಹಾಗೂ ಅಮೆರಿಕನ್ ಪಡೆಗಳು ಇರಾಕನ್ನು ತೊರೆಯುವುದಕ್ಕೆ ಕ್ಷಣಗಣನೆಯನ್ನು ಘೋಷಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News