ಮಹಾರಾಷ್ಟ್ರದಲ್ಲಿ ಎನ್‌ಪಿಆರ್‌ಗೆ ತಡೆ ಇಲ್ಲ: ಉದ್ಧವ್ ಠಾಕ್ರೆ

Update: 2020-02-18 15:23 GMT

ಮುಂಬೈ, ಫೆ. 18: ತಾನು ರಾಜ್ಯದಲ್ಲಿ ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್)ಗೆ ತಡೆ ಒಡ್ಡುವುದಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಹೇಳಿದ್ದಾರೆ.

 ನಾನು ಎನ್‌ಪಿಆರ್ ಕಲಂ ಅನ್ನು ವೈಯುಕ್ತಿಕವಾಗಿ ಪರಿಶೀಲಿಸಲಿದ್ದೇನೆ. ಮಹಾರಾಷ್ಟ್ರದಲ್ಲಿ ಎನ್‌ಪಿಆರ್ ಅನುಷ್ಠಾನದಿಂದ ಯಾವುದೇ ಸಮಸ್ಯೆ ಆಗಲಾರದು ಎಂದು ಅವರು ಹೇಳಿದ್ದಾರೆ. ‘‘ಸಿಎಎ ಹಾಗೂ ಎನ್‌ಆರ್‌ಸಿ ಬೇರೆ ಹಾಗೂ ಎನ್‌ಪಿಆರ್ ಬೇರೆ. ಸಿಎಎ ಅನುಷ್ಠಾನಗೊಳ್ಳುತ್ತದೆ ಎಂದು ಯಾರೊಬ್ಬರೂ ಆತಂಕಪಟ್ಟುಕೊಳ್ಳಬೇಕಾಗಿಲ್ಲ. ಎನ್‌ಆರ್‌ಸಿ ಇಲ್ಲಿ ಇರುವುದಿಲ್ಲ ಹಾಗೂ ರಾಜ್ಯದಲ್ಲಿ ಅನುಷ್ಠಾನಗೊಳಿಸುವುದಿಲ್ಲ’’ಎಂದು ಠಾಕ್ರೆ ಟ್ವೀಟ್ ಮಾಡಿದ್ದಾರೆ.

 ಯಾವುದೇ ವಿವಾದ ಇಲ್ಲದೇ ಇರುವುದರಿಂದ ಎನ್‌ಪಿಆರ್ ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತದೆ ಎಂದು ಅವರು ತಿಳಿಸಿದರು. ರಾಜ್ಯದಲ್ಲಿ ಎನ್‌ಆರ್‌ಸಿ ಅನುಷ್ಠಾನಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಠಾಕ್ರೆ ಹೇಳಿದರು. ‘‘ಒಂದು ವೇಳೆ ಎನ್‌ಆರ್‌ಸಿಯನ್ನು ಅನುಷ್ಠಾನಗೊಳಿಸಿದರೆ, ಅದು ಹಿಂದೂಗಳು ಹಾಗೂ ಮುಸ್ಲಿಮರ ಮೇಲೆ ಮಾತ್ರವಲ್ಲ ಆದಿವಾಸಿಗಳ ಮೇಲೂ ಪರಿಣಾಮ ಬೀರುತ್ತದೆ. ಎನ್‌ಪಿಆರ್ ಸಮೀಕ್ಷೆ. ಹತ್ತು ವರ್ಷಗಳಿಗೆ ಒಮ್ಮೆ ನಡೆಯುವ ಸಮೀಕ್ಷೆಯಿಂದ ಯಾರಾದರೊಬ್ಬರಿಗೆ ಸಮಸ್ಯೆ ಉಂಟಾಗಿರುವ ಬಗ್ಗೆ ನನಗೆ ತಿಳಿದಿಲ್ಲ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News