ಗ್ರಾಹಕರ ವೆಚ್ಚ ಕುಸಿತ ಸಮೀಕ್ಷೆ ಬಹಿರಂಗಗೊಳಿಸಲ್ಲ

Update: 2020-02-18 15:48 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಫೆ. 18: ನಾಲ್ಕು ದಶಕಗಳಲ್ಲೇ ಮೊದಲ ಬಾರಿಗೆ ಗ್ರಾಹಕರ ವೆಚ್ಚದಲ್ಲಿ ಕುಸಿತ ತೋರಿಸುವ ಅಧಿಕೃತ ಸಮೀಕ್ಷೆಯನ್ನು ಬಹಿರಂಗಗೊಳಿಸಲಾಗುವುದು ಎಂದು ತಿಂಗಳ ಹಿಂದೆ ರಾಷ್ಟ್ರೀಯ ಅಂಕಿಅಂಶ ಆಯೋಗ (ಎನ್‌ಎಸ್‌ಸಿ) ಅಧ್ಯಕ್ಷ ಬಿಮಲ್ ಕುಮಾರ್ ರಾಯ್ ಹೇಳಿದ್ದರು. ಆದರೆ, ಈಗ ಸ್ವಾಯತ್ತ ಸಂಸ್ಥೆಯಾಗಿರುವ ಎನ್‌ಎಸ್‌ಸಿ ವರದಿ ಬಿಡುಗಡೆ ಮಾಡದಿರಲು ನಿರ್ಧರಿಸಿದೆ.

ಎನ್‌ಎಸ್‌ಸಿ ತನ್ನ ಈ ಹಿಂದಿನ ನಿಲುವಿನಿಂದ ಹಿಂದೆ ಸರಿಯಲು ಕಾರಣ ಏನು ಎಂದು ಪ್ರಶ್ನಿಸಿದಾಗ, ಬಿಮಲ್ ಕುಮಾರ್ ರಾಯ್, ನಾನು ಪ್ರಯತ್ನಿಸಿದ್ದೆ. ಸಮೀಕ್ಷೆಯನ್ನು ಬಿಡುಗಡೆ ಮಾಡುವಂತೆ ನಾನು ಪ್ರಸ್ತಾವ (ಜನವರಿ 15ರಂದು ನಡೆದ ಎನ್‌ಎಸ್‌ಸಿ ಸಭೆಯಲ್ಲಿ) ಮಾಡಿದ್ದೆ. ಆದರೆ, ನನಗೆ ಬೆಂಬಲ ಸಿಗಲಿಲ್ಲ. ನಾನು ಈ ಪ್ರಸ್ತಾಪವನ್ನು ಅಧ್ಯಕ್ಷರ ಮುಂದಿರಿಸಿದೆ. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ. ಇದಕ್ಕಿಂತ ಹೆಚ್ಚೇನೂ ನಾನು ಹೇಳಲು ಸಾಧ್ಯವಿಲ್ಲ ಎಂದರು.

ಎನ್‌ಎಸ್‌ಸಿ ಸಭೆಯಲ್ಲಿ ಸಮೀಕ್ಷೆ ಅಂಕಿಅಂಶವನ್ನು ಬಿಡುಗಡೆ ಮಾಡಲು ಮುಖ್ಯ ಅಂಕಿಅಂಶ ಶಾಸ್ತ್ರಜ್ಞ ಪ್ರವೀಣ್ ಶ್ರೀವಾತ್ಸವ ಆಕ್ಷೇಪಿಸಿದ್ದರು. ಆದರೆ, ಒಬ್ಬರು ಸದಸ್ಯರು ಇದನ್ನು ಪ್ರಶ್ನಿಸಿದ್ದರು. ಅಂಕಿಅಂಶವನ್ನು ಬಹಿರಂಗಗೊಳಿಸುವಂತೆ ಆಗ್ರಹಿಸಿದ್ದರು. ಆದರೆ, ಸದಸ್ಯರಿಗೆ ನೀಡಲಾದ ಸಭೆಯ ನಿರ್ಣಯದಲ್ಲಿ ಈ ಸದಸ್ಯನ ನಿಲುವನ್ನು ಸಂಯೋಜಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಇದು ಎನ್‌ಎಸ್‌ಸಿಯಲ್ಲಿ ನಡೆಸಲಾದ ಈ ಬಗೆಗಿನ ಚರ್ಚೆಯ ರೀತಿಯ ಬಗ್ಗೆ ಹುಬ್ಬೇರಿಸುವಂತೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News