ಫ್ರಾನ್ಸ್,ಬ್ರಿಟನ್ ಹಿಂದಿಕ್ಕಿದ ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ: ವರದಿ

Update: 2020-02-18 18:01 GMT

ಹೊಸದಿಲ್ಲಿ,ಫೆ.18: ಫ್ರಾನ್ಸ್ ಮತ್ತು ಬ್ರಿಟನ್‌ಗಳನ್ನು ಹಿಂದಿಕ್ಕುವ ಮೂಲಕ ಭಾರತವು 2019ನೇ ಸಾಲಿಗೆ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಅಮೆರಿಕದ ಚಿಂತನ ಚಿಲುಮೆ ‘ದಿ ವರ್ಲ್ಡ್ ಪಾಪ್ಯುಲೇಷನ್ ರಿವ್ಯು’ ತನ್ನ ವರದಿಯಲ್ಲಿ ತಿಳಿಸಿದೆ.

ಭಾರತವು ತನ್ನ ಹಿಂದಿನ ಸ್ವಯಂಪೂರ್ಣ ನೀತಿಗಳಿಂದ ಮುಕ್ತ ಮಾರುಕಟ್ಟೆ ಆರ್ಥಿಕತೆಯಾಗಿ ಅಭಿವೃದ್ಧಿಗೊಳ್ಳುತ್ತಿದೆ ಎಂದಿರುವ ವರದಿಯು,ಭಾರತದ ಜಿಡಿಪಿಯು 2.94 ಲ.ಕೋ.ಡಾಲರ್‌ಗಳದ್ದಾಗಿದ್ದರೆ ಬ್ರಿಟನ್ ಮತ್ತು ಫ್ರಾನ್ಸ್‌ನ ಆರ್ಥಿಕತೆಗಳು ಅನುಕ್ರಮವಾಗಿ 2.83 ಲ.ಕೋ.ಡಾ. ಮತ್ತು 2.71 ಲ.ಕೋ.ಡಾ.ಗಾತ್ರದ್ದಾಗಿವೆ. ಖರೀದಿ ಶಕ್ತಿ ಸಾಮ್ಯತೆಯ ದೃಷ್ಟಿಯಲ್ಲಿ ಭಾರತದ ಜಿಡಿಪಿ 10.51 ಲ.ಕೋ.ಡಾಲರ್‌ಗಳಾಗಿದ್ದು,ಜಪಾನ್ ಮತ್ತು ಜರ್ಮನಿಗಳನ್ನು ಮೀರಿಸಿದೆ. ಅಮೆರಿಕದ ತಲಾದಾಯ 62,794 ಡಾ.ಗೆ ಹೋಲಿಸಿದರೆ ಭಾರತದ ಅಧಿಕ ಜನಸಂಖ್ಯೆಯಿಂದಾಗಿ ಅದರ ತಲಾದಾಯವು 2,170 ಡಾ.ಆಗಿದೆ ಎಂದು ಹೇಳಿದೆ. ಆದರೆ ಭಾರತದ ವಾಸ್ತವ ಜಿಡಿಪಿ ಪ್ರಗತಿ ದರವು ಸತತ ಮೂರನೇ ವರ್ಷಕ್ಕೆ ಶೇ.7.5ರಿಂದ ಶೇ.5ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News