ಮಹಿಳೆಯರಿಗೆ ಹೋರಾಟದ ಪಾತ್ರ ನೀಡಲು ಇದು ಸಕಾಲವಲ್ಲ:ಲೆ.ಜ.ಆರ್.ಪಿ.ಸಿಂಗ್

Update: 2020-02-19 15:26 GMT

ಡೆಹ್ರಾಡೂನ್,ಫೆ.19: ಮಹಿಳಾ ಅಧಿಕಾರಿಗಳಿಗೆ ಕಾಯಂ ಸೇವಾವಧಿಯನ್ನು ನೀಡಬೇಕು ಮತ್ತು ಕಮಾಂಡ್ ಹುದ್ದೆಗಳಿಗೆ ಅವರನ್ನು ನೇಮಕಗೊಳಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಸರಕಾರಕ್ಕೆ ಆದೇಶಿಸಿರುವುದನ್ನು ಭಾರತೀಯ ಸೇನೆಯು ಸ್ವಾಗತಿಸುತ್ತದೆ,ಆದರೆ ಮಹಿಳೆಯರನ್ನು ಹೋರಾಟದ ಕರ್ತವ್ಯಗಳಲ್ಲಿ ತೊಡಗಿಸಲು ಇದು ಸರಿಯಾದ ಸಮಯವಲ್ಲ ಎಂದು ವೆಸ್ಟರ್ನ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಲೆ.ಜ.ಆರ್.ಪಿ.ಸಿಂಗ್ ಅವರು ಹೇಳಿದ್ದಾರೆ.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು,‘ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಈ ಬಗ್ಗೆ ನಮಗೆ ಯಾವುದೇ ಸಮಸ್ಯೆಯಾಗಲೀ ವಿಷಾದವಾಗಲೀ ಇಲ್ಲ. ಆದರೆ ಹೋರಾಟದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಮಹಿಳಾ ಅಧಿಕಾರಿಗಳನ್ನು ಅದಕ್ಕೆ ನಿಯೋಜಿಸಲು ಸೂಕ್ತ ಸಮಯವಿನ್ನೂ ಬಂದಿಲ್ಲ ಎಂದು ನಾನು ಭಾವಿಸಿದ್ದೇನೆ ’ ಎಂದರು.

ಹೋರಾಟದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ವಿಕಸನ ಪ್ರಕ್ರಿಯೆ ಎಂದು ಬಣ್ಣಿಸಿದ ಲೆ.ಜ.ಸಿಂಗ್,‘ಹೋರಾಟಕ್ಕೆ ಸಂಬಂಧಿಸಿದ ವಿಭಾಗಗಳಲ್ಲಿ ಮಹಿಳೆಯರು ಈಗಾಗಲೇ ನೇಮಕಗೊಂಡಿದ್ದ್ದಾರೆ. ಭವಿಷ್ಯದಲ್ಲಿ ಅವರು ಇನ್ನಷ್ಟು ಹೆಚ್ಚಿನ ಜವಾಬ್ದಾರಿಗಳನ್ನು ಪಡೆಯಲಿದ್ದಾರೆ ಮತ್ತು ಭಾರತೀಯ ಸೇನೆಗೆ ಕೊಡುಗೆಯನ್ನು ಸಲ್ಲಿಸಲಿದ್ದಾರೆ ಎಂದು ನಾವು ಆಶಿಸಿದ್ದೇವೆ ’ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News