ಟ್ರಂಪ್ ಹೇಳಿಕೆ ಭಾರತದ ಘನತೆಯನ್ನು ಅವಮಾನಿಸಿದೆ:ಕಾಂಗ್ರೆಸ್

Update: 2020-02-19 17:31 GMT

ಹೊಸದಿಲ್ಲಿ,ಫೆ.19: ಇದೇ 24-25ರಂದು ತನ್ನ ಭಾರತ ಭೇಟಿಗೆ ಮುನ್ನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತವು ತನ್ನ ರಾಷ್ಟ್ರವನ್ನು ಸರಿಯಾಗಿ ನಡೆಸಿಕೊಂಡಿರಲಿಲ್ಲ ’ಎಂಬ ಹೇಳಿಕೆಗೆ ಕಾಂಗ್ರೆಸ್ ಬುಧವಾರ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ.

ಟ್ರಂಪ್ ಹೇಳಿಕೆಯು ಭಾರತದ ಘನತೆಯನ್ನು ಅವಮಾನಿಸಿದೆ ಮತ್ತು ಸರಕಾರವು ಇದಕ್ಕೆ ಸೂಕ್ತವಾಗಿ ಉತ್ತರಿಸಬೇಕು ಎಂದು ಅದು ಹೇಳಿದೆ. ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಮನೀಷ ತಿವಾರಿ ಅವರು,ಟ್ರಂಪ್ ಹೇಳಿಕೆಯು ಕಳೆದ ಹಲವಾರು ವರ್ಷಗಳಲ್ಲಿ ಭಾರತ-ಅಮೆರಿಕ ಸಂಬಂಧಗಳಲ್ಲಿ ಸಾಧಿಸಲಾಗಿರುವ ಪ್ರಗತಿಯನ್ನು ಕಡೆಗಣಿಸಿದೆ ಎಂದರು. ಟ್ರಂಪ್ ಭೇಟಿಯು ವ್ಯಾಪಾರಾತ್ಮಕವಾಗಿರುವಂತೆ ಕಂಡು ಬರುತ್ತಿದೆಯೇ ಹೊರತು ವ್ಯೆಹಾತ್ಮಕವಾಗಲ್ಲ ಎಂದೂ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News