ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ಅಮಾನತು

Update: 2020-02-20 07:02 GMT

ಕರಾಚಿ, ಫೆ.20: ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ರನ್ನು  ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತಕ್ಷಣದಿಂದ ಅಮಾನತುಗೊಳಿಸಿದೆ,

ಬ್ಯಾಟ್ಸ್ ಮನ್ ಅಕ್ಮಲ್  ವಿರುದ್ಧ ಭ್ರಷ್ಟಾಚಾರ ಆರೋಪ ತನಿಖೆ ಬಾಕಿ ಉಳಿದಿರುವಾಗಲೇ ಅವರನ್ನು ಪಿಸಿಬಿ ಅಮಾನತುಗೊಳಿಸಿದೆ.

ಅಕ್ಮಲ್   ಯಾವುದೇ ಕ್ರಿಕೆಟ್ ಸಂಬಂಧಿತ ಚಟುವಟಿಕೆಯಲ್ಲಿ ಅವರು ಭಾಗವಹಿಸಲು ಸಾಧ್ಯವಿಲ್ಲ ಎಂದು ಪಿಸಿಬಿ  ಪ್ರಕಟಣೆಯಲ್ಲಿ ತಿಳಿಸಿದೆ.

ತನಿಖೆ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಯಾವುದೇ ಹೆಚ್ಚಿನ ಪ್ರತಿಕ್ರಿಯೆಗಳನ್ನು ನೀಡುವುದಿಲ್ಲ ಎಂದು  ಪಿಸಿಬಿ  ಹೇಳಿದೆ.

ಅಕ್ಮಲ್ ಅವರ ಪಿಎಸ್ಎಲ್ ತಂಡ ಕ್ವೆಟ್ಟಾ ಗ್ಲಾಡಿಯೇಟರ್ಸ್ ಗೆ  ಗುರುವಾರದಿಂದ ಆರಂಭವಾಗಲಿರುವ  2020 ರ ಆವೃತ್ತಿಗೆ ಅವರ ಬದಲಿಗಾಗಿ ಬೇರೆ  ಆಟಗಾರರನ್ನು  ಅವಕಾಶವಿದೆ.

ಅಕ್ಟೋಬರ್‌ನಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನ ಪರ ಆಡಿದ 29 ವರ್ಷದ ಅಕ್ಮಲ್ 16 ಟೆಸ್ಟ್, 121 ಏಕದಿನ ಮತ್ತು 84 ಟ್ವೆಂಟಿ-20 ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News