1000 ಕೋಟಿ ರೂ. ಪಾವತಿಸಿದ ವೊಡಾಪೋನ್ ಸಂಸ್ಥೆ

Update: 2020-02-20 14:54 GMT

ಹೊಸದಿಲ್ಲಿ, ಫೆ.20: ವೊಡಾಫೋನ್ ಐಡಿಯಾ ಸಂಸ್ಥೆ ದೂರ ಸಂಪರ್ಕ ಇಲಾಖೆಗೆ 1,000 ಕೋಟಿ ರೂ. ಪಾವತಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಸ್ಥೆ ಬಡ್ಡಿ, ದಂಡ ಶುಲ್ಕ ಸೇರಿ ಒಟ್ಟು 53,000 ಕೋಟಿ ರೂ. ಪಾವತಿಸಲು ಬಾಕಿಯಿದ್ದು ಇದರಲ್ಲಿ 2,500 ಕೋಟಿ ರೂ.ಯನ್ನು ಸೋಮವಾರ ದೂರ ಸಂಪರ್ಕ ಇಲಾಖೆಗೆ ಪಾವತಿಸಿತ್ತು. ಗುರುವಾರ ಮತ್ತೆ 1000 ಕೋಟಿ ರೂ. ಪಾವತಿಸಿದೆ. ಬಾಕಿ ಇರಿಸಿಕೊಂಡಿರುವ ಮೊತ್ತವನ್ನು ತಕ್ಷಣ ಪಾವತಿಸದಿದ್ದರೆ ಕ್ರಮ ಕೈಗೊಳ್ಳುವುದಾಗಿ ಸರಕಾರ ಫೆ.14ರಂದು ಟೆಲಿಕಾಂ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿತ್ತು. ಸೋಮವಾರ ದೂರಸಂಪರ್ಕ ಇಲಾಖೆಗೆ 1,000 ಕೋಟಿ ರೂ. ಪಾವತಿಸಿರುವುದಾಗಿ ಭಾರ್ತಿ ಏರ್‌ಟೆಲ್ ಸಂಸ್ಥೆ ತಿಳಿಸಿದೆ.

ಟಾಟಾ ಟೆಲಿಸರ್ವಿಸಸ್ 14,000 ಕೋಟಿ ರೂ.ಗೂ ಹೆಚ್ಚಿನ ಮೊತ್ತ ಪಾವತಿಸಬೇಕಿರುವ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸುವುದಾಗಿ ಇಲಾಖೆ ತಿಳಿಸಿದೆ. ಸೋಮವಾರ 2,197 ಕೋಟಿ ರೂ. ಪಾವತಿಸಿರುವುದಾಗಿ ಟಾಟಾ ಟೆಲಿಸರ್ವಿಸಸ್ ತಿಳಿಸಿದೆ. ಈ ಮಧ್ಯೆ , ಬಾಂಬೆ ಸ್ಟಾಕ್ ಎಕ್ಸ್‌ ಚೇಂಜ್‌ನಲ್ಲಿ ಗುರುವಾರ ವಹಿವಾಟು ಆರಂಭವಾಗುತ್ತಿದ್ದಂತೆಯೇ ವೊಡಾಫೋನ್ ಐಡಿಯಾದ ಶೇರುಗಳ ಮೌಲ್ಯದಲ್ಲಿ 4.30% ಹೆಚ್ಚಳ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News