ವನಿತೆಯರ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್‌ಗೆ ನಾಳೆ ಚಾಲನೆ

Update: 2020-02-20 17:06 GMT

ಮುಂಬೈ,ಫೆ.20: ವನಿತೆಯರ ವಿಶ್ವಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಶುಕ್ರವಾರ ಆತಿಥೇಯ ಆಸ್ಟ್ರೇಲಿಯವನ್ನು ಭಾರತ ಎದುರಿಸಲಿದೆ.

ಇತ್ತೀಚೆಗೆ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ 11 ರನ್‌ಗಳ ಸೋಲು ಅನುಭವಿಸಿತ್ತು. ಭಾರತದೊಂದಿಗೆ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ತಂಡ ತ್ರಿಕೋನ ಸರಣಿಯಲ್ಲಿ ಪಾಲ್ಗೊಂಡಿತ್ತು.

ಭಾರತ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಫೈನಲ್‌ನಲ್ಲಿ ಸೋಲು ಅನುಭವಿಸಿತ್ತು. ಆಸ್ಟ್ರೇಲಿಯ ಈ ವರೆಗೆ ನಡೆದಿರುವ 6 ಆವೃತ್ತಿಗಳ ವಿಶ್ವಕಪ್‌ನಲ್ಲಿ 4 ಬಾರಿ ಬಾರಿ ಪ್ರಶಸ್ತಿ ಜಯಿಸಿದೆ. ಭಾರತಕ್ಕೆ ಈ ವರೆಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಭಾರತ ತಂಡ ಬಲಿಷ್ಠವಾಗಿದ್ದರೂ, ತಂಡದ ಮಧ್ಯಮ ಮತ್ತು ಕೆಳ ಕ್ರಮಾಂಕದಲ್ಲಿ ಪ್ರದರ್ಶನ ಚೆನ್ನಾಗಿಲ್ಲ. ಭಾರತ ಈ ಬಾರಿ ಪ್ರಶಸ್ತಿ ಗೆಲ್ಲಬೇಕಾಗಿದರೆ ನಾಕೌಟ್ ಹಂತದಲ್ಲಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್‌ತಂಡವನ್ನು ಸದೆಬಡಿಯಬೇಕಾಗಿದೆ. ಸ್ಟಾರ್ ಓಪನರ್ ಸ್ಮತಿ ಮಂಧಾನ ಅವರಿಗೆ 16ರ ಹರೆಯದ ಶೆಫಾಲಿ ವರ್ಮಾ ಉತ್ತಮ ಸಾಥ್ ನೀಡಬೇಕಾಗಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಲ್ಲಿ ಅಪಾರ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಅವರು ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಆಸ್ಟ್ರೇಲಿಯ ವಿರುದ್ಧ ತನ್ನ ಪ್ರದರ್ಶನದಲ್ಲಿ ಸುಧಾರಣೆ ತರುವ ವಿಶ್ವಾಸದಲ್ಲಿದ್ದಾರೆ. ತಂಡದಲ್ಲಿ 16ರ ಹರೆಯದ ಇನ್ನೋರ್ವ ಆಟಗಾರ್ತಿ ಇದ್ದಾರೆ. ಅವರೇ ರಿಚಾ ಘೋಷ್. ತ್ರಿಕೋನ ಸರಣಿಯ ಫೈನಲ್‌ನಲ್ಲಿ ಟ್ವೆಂಟಿ-20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅವರು 17 ರನ್ ಗಳಿಸಿದ್ದರು. ಇದೇ ಪಂದ್ಯದಲ್ಲಿ ನಾಯಕಿ ಕೌರ್ ಆಕರ್ಷಕ 66 ರನ್ ಸಿಡಿಸಿದ್ದರು. ಭಾರತ ತಂಡದಲ್ಲಿ ಸ್ಪಿನ್ನರ್‌ಗಳಿದ್ದಾರೆ. ಆದರೆ ಅತ್ಯುತ್ತಮ ವೇಗದ ಬೌಲರ್‌ಗಳ ಕೊರೆತೆ ಇದೆ. ಶಿಖಾ ಪಾಂಡೆ ತಂಡದಲ್ಲಿ ಏಕೈಕ ಶ್ರೇಷ್ಠ ಬೌಲರ್. ಅವರು ಎದುರಾಳಿ ತಂಡವನ್ನು ಬೇಗನೇ ನಿಯಂತ್ರಿಸಲು ಸಾಧ್ಯವಾದರೆ ಭಾರತಕ್ಕೆ ಯಶಸ್ಸು ಸಾಧ್ಯ.

< ಭಾರತ: ಹರ್ಮನ್‌ಪ್ರೀತ್ ಕೌರ್(ನಾಯಕಿ), ತಾನಿಯಾ ಭಾಟಿಯಾ, ಹರ್ಲಿನ್ ಡಿಯೊಲ್, ರಾಜೇಶ್ವರಿ ಗಾಯಕ್ವಾಡ್, ರಿಚಾ ಘೋಷ್, ವೇದಾ ಕೃಷ್ಣಮೂರ್ತಿ, ಸ್ಮತಿ ಮಂಧಾನ, ಶಿಖಾ ಪಾಂಡೆ, ಆರುಂಧತಿ ರೆಡ್ಡಿ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ಶೆಫಾಲಿ ವರ್ಮಾ, ಪೂನಮ್ ಯಾದವ್, ರಾಧಾ ಯಾದವ್.

<ಆಸ್ಟ್ರೇಲಿಯ: ಮೆಗ್ ಲ್ಯಾನಿಂಗ್(ನಾಯಕಿ), ಎರಿನ್ ಬರ್ನ್ಸ್, ನಿಕೊಲಾ ಕ್ಯಾರೆಯ್, ಅಸ್ಲೇ ಗಾರ್ಡೆನರ್, ರಾಚೇಲ ಹಾಯಿನೆಸ್ (ಉಪನಾಯಕಿ), ಅಲಿಸಾ ಹಿಲೇ (ವಿಕೆಟ್ ಕೀಪರ್), ಜೆಸ್ ಜೊನಾಸ್ಸೆನ್, ಡೆಲಿಸಾ ಕಿಮ್ಮಿನ್ಸೆ, ಸೋಫಿ ಮೊಲಿನೆಕ್ಸ್, ಬೆತ್ ಮೋನಿ, ಎಲ್ಸಿ ಪೆರ್ರಿ, ಮೆಗಾನ್ ಚುಟ್, ಅನಾಬೆಲ್ ಸದರ್‌ಲ್ಯಾಂಡ್, ಟೈಲಾ ವಲಾಯಮಿನೆಕ್, ಜಾರ್ಜಿಯಾ ವಾರೆಹ್ಯಾಮ್.

<ಪಂದ್ಯದ ಸಮಯ: ಮಧ್ಯಾಹ್ನ 1:30ಕ್ಕೆ ಆರಂಭ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News