'ಚಕ್ ದೇ ಇಂಡಿಯಾ'ದ ನೈಜ ನಾಯಕಿಯಿಂದ ಪತಿ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲು

Update: 2020-02-21 10:01 GMT

ಇಂಫಾಲ್, ಫೆ.21: ಭಾರತ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ವೈಖೋಮ್ ಸೂರಜ್ ಲತಾದೇವಿ ತನ್ನ ಪತಿಯ ವಿರುದ್ಧವೇ ಕೌಟುಂಬಿಕ ದೌರ್ಜನ್ಯ, ದೈಹಿಕ ಹಾಗೂ ಮಾನಸಿಕ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 2005ರಲ್ಲಿ ಮದುವೆಯಾದ ಬಳಿಕ ನನ್ನ ಪತಿ ಶಾಂತಾ ಸಿಂಗ್ ನನಗೆ ಕಿರುಕುಳ ನೀಡುತ್ತಿದ್ದಾರೆ. ಅನೈತಿಕ ವರ್ತನೆ ಮೂಲಕ ಅರ್ಜುನ ಪ್ರಶಸ್ತಿ ಪಡೆದಿರುವುದಾಗಿ ನನ್ನನ್ನು ನಿಂದಿಸುತ್ತಿದ್ದಾರೆ. ಅವರ ಈ ವರ್ತನೆಗೆ ವರದಕ್ಷಿಣೆ ಇದಕ್ಕೆ ಮುಖ್ಯ ಕಾರಣ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಹಾಕಿ ಆಟಗಾರ್ತಿ ದೂರಿದರು.

ಲತಾದೇವಿ ನಾಯಕತ್ವದಲ್ಲಿ ಭಾರತ ಮಹಿಳಾ ಹಾಕಿ ತಂಡ 2002ರ ಕಾಮನ್‌ವೆಲ್ತ್ ಗೇಮ್ಸ್, 2003ರ ಆಫ್ರೊ-ಏಶ್ಯನ್ ಗೇಮ್ಸ್ ಹಾಗೂ 2004ರ ಹಾಕಿ ಏಶ್ಯಕಪ್‌ನಲ್ಲಿ ಮೂರು ಚಿನ್ನದ ಪದಕ ಜಯಿಸಿತ್ತು. ಲತಾದೇವಿಯ ವೃತ್ತಿಜೀವನ ಪ್ರೇರಿತವಾಗಿ 2003ರಲ್ಲಿ ‘‘ಚಕ್ ದೇ ಇಂಡಿಯಾ’’ ಎಂದು ಚಿತ್ರವೂ ಮೂಡಿಬಂದಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News