ಬುರ್ಖಾ ಧರಿಸಿದ ಪುತ್ರಿಯನ್ನು ತಸ್ಲೀಮಾ ನಸ್ರೀನ್ ಟೀಕಿಸಿದ ಬಗ್ಗೆ ಎ.ಆರ್. ರಹ್ಮಾನ್ ಪ್ರತಿಕ್ರಿಯಿಸಿದ್ದು ಹೀಗೆ ...

Update: 2020-02-21 10:46 GMT

ಹೊಸದಿಲ್ಲಿ: ತನ್ನ ಪುತ್ರಿ ಖತೀಜಾ ರಹ್ಮಾನ್‍ ಬುರ್ಖಾ ಧರಿಸಿದ ಬಗ್ಗೆ ಲೇಖಕಿ ತಸ್ಲೀಮಾ ನಸ್ರೀನ್ ಟೀಕಿಸಿದ ವಿಚಾರದಲ್ಲಿ ತಾನು 'ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿರಲಿಲ್ಲ' ಎಂದು ಖ್ಯಾತ ಸಂಗೀತ ನಿರ್ದೇಶಕ ಎ. ಆರ್. ರಹ್ಮಾನ್ ಹೇಳಿದ್ದಾರೆ.

"ನಮ್ಮ ಸಮಸ್ಯೆಗಳು ಹಾಗೂ ನಮ್ಮ ಕಷ್ಟಗಳನ್ನು ಅವರು (ಮಕ್ಕಳು) ಅರಿಯುವಂತಾಗುವ ರೀತಿಯಲ್ಲಿ ನಾವು ಅವರನ್ನು ಬೆಳೆಸಿದರೆ ಒಳ್ಳೆಯದು ಎಂದು ನಾನಂದುಕೊಂಡಿದ್ದೇನೆ. ನಮ್ಮಿಂದ ಒಳ್ಳೆಯದನ್ನೂ ಕೆಟ್ಟದ್ದನ್ನೂ ಬಳುವಳಿಯಾಗಿ ಪಡೆಯಬೇಕೆಂದು ಅವರಿಗೆ ಗೊತ್ತು. ಅಷ್ಟೇ, ನಂತರ ಅವರಿಗಿಷ್ಟ ಬಂದಂತೆ ಮಾಡುವ ಸ್ವಾತಂತ್ರ್ಯ ನೀಡಲಾಗುತ್ತದೆ. ಆಕೆ ಹಾಗೆ ಮಾಡಿದ್ದಳು ಹಾಗೂ ನಂತರ 'ಮುಂದಿನ ಪ್ರಶ್ನೆಯ ಬಗ್ಗೆ ಏನು? ನೀನು ಅದಕ್ಕೆ ಉತ್ತರಿಸಿದ್ದೀಯಾ' ಎಂದು ನಾನು ಆಕೆಗೆ ಕೇಳಿದೆ 'ಅಷ್ಟೇ ಅಪ್ಪಾ' ಆಯಿತು ಎಂದು ಆಕೆ ಹೇಳಿದಳು'' ಎಂದು ರಹ್ಮಾನ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಪೋಸ್ಟ್ ಮಾಡುವ ಮುಂಚೆ ಪುತ್ರಿ ನಿಮ್ಮಲ್ಲಿ ಹೇಳಿದ್ದರೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಇಲ್ಲ ಆಕೆ ಅದನ್ನು ಪೋಸ್ಟ್ ಮಾಡಿದ್ದಳು ಹಾಗೂ ನಂತರ ನಾನು ಇನ್‍ ಸ್ಟಾಗ್ರಾಂನಲ್ಲಿ ಹಾಕಿದೆ. ಆಕೆ ಹಿಜಾಬ್ ಧರಿಸಿದ್ದಾಳೆ ಹಾಗೂ ಅದು ಆಕೆಯ ಆಯ್ಕೆಯಾಗಿದ್ದರಿಂದ ಅದು ಅಗತ್ಯ ಎಂದು ನಾನಂದುಕೊಂಡೆ'' ಎಂದರು.

ಬುರ್ಖಾ ಧರಿಸಲು ಆಯ್ದುಕೊಂಡು ಆಕೆ 'ಸ್ವಾತಂತ್ರ್ಯವನ್ನು ಕಂಡುಕೊಂಡಿದ್ದಾಳೆ' ಎಂಬುದು ಆಕೆಯ ಭಾವನೆ. ಪುರುಷರು ಬುರ್ಖಾ ಧರಿಸುವ ಹಾಗಿಲ್ಲ, ಇಲ್ಲದೇ ಇದ್ದರೆ ತಾನು ಕೂಡ ಹಾಕುತ್ತಿದ್ದೆ.  ಎಲ್ಲಿಗೂ ಹೋಗಿ ಶಾಪಿಂಗ್ ಮಾಡುವುದು ಹಾಗೂ ಸ್ಥಿರ ಜೀವನ ನಡೆಸಲು ಅದರಿಂದ ಸುಲಭ. ಆಕೆ  ತನ್ನ  ಕೆಲಸದಾಕೆಯ ತಾಯಿಯ ಅಥವಾ ಸಂಬಂಧಿಯ ಅಂತ್ಯಕ್ರಿಯೆಗೆ ಹೋಗುವಂತಹವಳು. ಆಕೆಯ ಸರಳತೆಗೆ ನಾನು ಮಾರುಹೋಗಿದ್ದೇನೆ''ಎಂದರು.

ಇದೀಗ ಡಿಲೀಟ್ ಮಾಡಲ್ಪಟ್ಟ ಟ್ವೀಟ್‍ ನಲ್ಲಿ ತಸ್ಲೀಮಾ ನಸ್ರೀನ್ ಹೀಗೆ ಬರೆದಿದ್ದರು. "ನನಗೆ ಎ ಆರ್ ರಹ್ಮಾನ್ ಅವರ ಸಂಗೀತ ಬಹಳ ಇಷ್ಟ. ಆದರೆ ಅವರ ಪ್ರೀತಿಯ ಪುತ್ರಿಯನ್ನು ನೋಡಿದಾಗಲೆಲ್ಲಾ ನನಗೆ ಉಸಿರುಗಟ್ಟಿದಂತಾಗುತ್ತದೆ. ಸಂಸ್ಕಾರಯುತ ಕುಟುಂಬದ ಶಿಕ್ಷಿತ ಮಹಿಳೆಯರನ್ನೂ ಸುಲಭವಾಗಿ ಬ್ರೈನ್‍ ವಾಶ್ ಮಾಡಬಹುದೆಂದು ತಿಳಿದು ಬೇಸರವಾಗಿತ್ತದೆ.''

ಇದಕ್ಕೆ ಪ್ರತಿಕ್ರಿಯಿಸಿದ್ದ ಖತೀಜಾ "ನನ್ನ ಉಡುಗೆಯಿಂದ ನಿಮಗೆ ಉಸಿರುಗಟ್ಟುತ್ತಿದೆಯೆಂದಾದರೆ ಕ್ಷಮಿಸಿ. ದಯವಿಟ್ಟು ಸ್ವಲ್ಪ ಶುದ್ಧ ಗಾಳಿಯನ್ನು ಪಡೆಯಿರಿ. ನನಗೆ ಉಸಿರುಗಟ್ಟುವುದಿಲ್ಲ. ಆದರೆ ನಾನು ಯಾವುದಕ್ಕೆ ಬದ್ಧಳಾಗಿದ್ದೇನೆಯೇ ಅದರ ಬಗ್ಗೆ ಹೆಮ್ಮೆಯಿದೆ. ಮಹಿಳಾವಾದಿ ಎಂಬ ಪದದ ನಿಜವಾದ ಅರ್ಥ ತಿಳಿಯಲು ನೀವು ಗೂಗಲ್ ಮಾಡಿ. ಅದು ಇತರ ಮಹಿಳೆಯರನ್ನು ಟೀಕಿಸುವುದು ಅಥವಾ ಅವರ ತಂದೆಯರನ್ನು ನಿಂದಿಸುವುದಲ್ಲ" ಎಂದು ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News