ಭಾರತದಲ್ಲಿ ಅತಿ ದೊಡ್ಡ ಚಿನ್ನದ ನಿಕ್ಷೇಪ ಪತ್ತೆ

Update: 2020-02-21 11:27 GMT
Photo: Wikipedia 

ಲಕ್ನೋ: ಉತ್ತರ ಪ್ರದೇಶದ ನಕ್ಸಲ್ ಪೀಡಿತ ಸೋನ್ ಭದ್ರ ಜಿಲ್ಲೆಯಲ್ಲಿ ಎರಡು ದಶಕಗಳ ಶೋಧದ ಬಳಿಕ ಭೂಗರ್ಭ ಸಮೀಕ್ಷಾ ಇಲಾಖೆ ಹಾಗೂ ಉತ್ತರ ಪ್ರದೇಶದ ಭೂಗರ್ಭ ಮತ್ತು ಗಣಿ ನಿರ್ದೇಶನಾಲಯ ಸುಮಾರು 3,500 ಟನ್ ಚಿನ್ನದ ನಿಕ್ಷೇಪ ಇರುವ ಎರಡು ಗಣಿಗಳನ್ನು ಪತ್ತೆ ಹಚ್ಚಿದೆ. ಇಲ್ಲಿರಬಹುದಾದ ಚಿನ್ನವು ಭಾರತದ ಸದ್ಯದ ಮೀಸಲು ಚಿನ್ನ (626 ಟನ್) ಪ್ರಮಾಣಕ್ಕಿಂತ ಸುಮಾರು ಐದು ಪಟ್ಟು ಹೆಚ್ಚಾಗಿದೆ.

"ಸರಕಾರ  ಗಣಿಗಾರಿಕೆಗೆ ಲೀಸ್ ನೀಡುವ ಕುರಿತಂತೆ ಚಿಂತಿಸುತ್ತಿದೆ. ಸಮೀಕ್ಷೆಯನ್ನು ಮೊದಲು ನಡೆಸಲಾಗುವುದು. ಚಿನ್ನದ ನಿಕ್ಷೇಪ ಸೋನ್ಪಹಾಡಿ ಹಾಗೂ ಹರ್ದಿ ಎಂಬಲ್ಲಿ ಪತ್ತೆಯಾಗಿದೆ. ಮೊದಲ ಸ್ಥಳದಲ್ಲಿ 2,700 ಟನ್ ಹಾಗೂ ಹರ್ದಿಯಲ್ಲಿ 650 ಟನ್ ಚಿನ್ನ ಇರಬಹುದು" ಎಂದು ಗಣಿ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಗಣಿಗಾರಿಕಾ ಇಲಾಖೆಯ ಏಳು ಸದಸ್ಯರ ತಂಡ ಗುರುವಾರ ಈ ಪ್ರದೇಶಕ್ಕೆ ಭೇಟಿ ನೀಡಿದ್ದು ಸಮೀಕ್ಷೆ ನಡೆಸಿ ಜಿಯೋ-ಟ್ಯಾಗಿಂಗ್ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News