ಸರಕಾರಿ ಆಸ್ಪತ್ರೆಯಲ್ಲಿ ಮಹಿಳಾ ನೌಕರರ ನಗ್ನಗೊಳಿಸಿ ವೈದ್ಯಕೀಯ ತಪಾಸಣೆ!

Update: 2020-02-21 14:52 GMT

ಸೂರತ್, ಫೆ.21: ಸೂರತ್ ಮಹಾನಗರ ಪಾಲಿಕೆ (ಎಸ್‌ಎಂಸಿ)ಯ ತರಬೇತಿ ನಿರತ ಮಹಿಳಾ ಗುಮಾಸ್ತರನ್ನು ವೈದ್ಯಕೀಯ ತಪಾಸಣೆಗಾಗಿ ಕೊಠಡಿಯೊಂದರಲ್ಲಿ ನಗ್ನವಾಗಿ ನಿಲ್ಲಿಸಿದ ಘಟನೆ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

ಸೂರತ್ ಮಹಾನಗರಪಾಲಿಕೆಯ 10 ಮಂದಿ ತರಬೇತಿ ನಿರತ ಮಹಿಳಾ ಗುಮಾಸ್ತರನ್ನು ಆಸ್ಪತ್ರೆಯ ಸ್ರ್ರೀರೋಗ ವಿಭಾಗದ ಕೊಠಡಿಯಲ್ಲಿ ವೈದ್ಯಕೀಯ ತಪಾಸಣೆಗಾಗಿ ನಗ್ನವಾಗಿ ನಿಲ್ಲಿಸಲಾಗಿತ್ತೆಂಬ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಸೂರತ್ ಮಹಾನಗರ ಪಾಲಿಕೆಯ ಆಯುಕ್ತ ಬಂಚ್ಛಾನಿಧಿ ಪಾಣಿ ಆದೇಶಿಸಿದ್ದಾರೆ

ಕೆಲವು ದಿನಗಳ ಹಿಂದೆ ಗುಜರಾತ್‌ನ ಭುಜ್ ಪಟ್ಟಣದಲ್ಲಿರುವ ಮಹಿಳಾ ಕಾಲೇಜೊಂದರ ವಿದ್ಯಾರ್ಥಿನಿಯರಿಗೆ ಅವರು ಮುಟ್ಟಾಗಿಲ್ಲವೆಂಬುದನ್ನು ಸಾಬೀತುಪಡಿಸಲು ಒಳಉಡುಪುಗಳನ್ನು ಕಳುಚುವಂತೆ ಹಾಸ್ಟೆಲ್ ಆಡಳಿತದ ಅಧಿಕಾರಿಗಳು ಬಲವಂತಪಡಿಸಿದ ಘಟನೆ ಜನರ ಮನಸ್ಸಿನಿಂದ ಮಾಯವಾಗುವ ಮೊದಲೇ , ಸೂರತ್‌ನಲ್ಲಿ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

  ಮಹಿಳಾ ವೈದ್ಯರುಗಳು ಅವಿವಾಹಿತ ಸ್ತ್ರೀಯರನ್ನು ಕೂಡಾ ಗರ್ಭಧಾರಣೆಯ ಪರೀಕ್ಷೆಗಳಿಗೆ ಒಳಪಡಿಸಿದರೆಂದು ಎಸ್‌ಎಂಇ ನೌಕರರ ಒಕ್ಕೂಟ ಆಪಾದಿಸಿದೆ.

   ಸೂರತ್ ಮಹಾನಗರ ಪಾಲಿಕೆ ನಡೆಸುತ್ತಿರುವ ಎಸ್‌ಎಂಐಎಂಇಆರ್ ಆಸ್ಪತ್ರೆಯಲ್ಲಿ ಫೆಬ್ರವರಿ 29ರಂದು ಈ ಘಟನೆ ನಡೆದಿರುವುದಾಗಿ ನೌಕರರ ಒಕ್ಕೂಟ ಆಪಾದಿಸಿದೆ.

ಈ ಘಟನೆಗೆ ಸಂಬಂಧಿಸಿದ ಆರೋಪಗಳ ಬಗ್ಗೆ ತನಿಖೆಗೆ ಪಾಣಿ ಅವರು ತ್ರಿಸದಸ್ಯ ಸಮಿತಿಯೊಂದನ್ನು ರಚಿಸಿದ್ದು, 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.

  ತನಿಖಾ ಆಯೋಗವು ಸೂರತ್ ಮೆಡಿಕಲ್ ಕಾಲೇಜ್‌ನ ಮಾಜಿ ಡೀನ್ ಡಾ.ಕಲ್ಪನಾ ದೇಸಾಯಿ, ಸಹಾಯಕ ಪೌರಾಡಳಿತ ಆಯುಕ್ತ ಗಾಯತ್ರಿ ಜರಿವಾಲಾ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ತೃಪ್ತಿ ಕಟಾರಿಯಾ ಅವರನ್ನು ಒಳಗೊಂಡಿದೆ.

   ಸೂರತ್ ಮಹಾನಗರಪಾಲಿಕೆಯ ನಿಯಮಗಳ ಪ್ರಕಾರ ತರಬೇತಿ ನಿರತ ಉದ್ಯೋಗಿಗಳು ತರಬೇತಿಯ ಆವಧಿಯಲ್ಲಿ ತಮ್ಮ ದೈಹಿಕ ಸಾಮರ್ಥ್ಯನ್ನು ಸಾಬೀತುಪಡಿಸಲು ದೈಹಿಕ ತಪಾಸಣೆಗೆ ಒಳಗಾಗಾಗಬೇಕಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News