ಸಮಾನ ನಾಗರಿಕ ಸಂಹಿತೆ ಬಲವಂತದಿಂದ ಹೇರಲು ಸಾಧ್ಯವಿಲ್ಲ: ಸುರ್ಜೆವಾಲ

Update: 2020-02-21 16:07 GMT

ಹೊಸದಿಲ್ಲಿ,ಫೆ.21: ಸಮಾನ ನಾಗರಿಕ ಸಂಹಿತೆಯನ್ನು ಬಲವಂತದಿಂದ ಹೇರಲು ಸಾಧ್ಯವಿಲ್ಲ, ಅದು ಐಚ್ಛಿಕವಾಗಿರಬೇಕು ಎಂದು ಕಾಂಗ್ರೆಸ್ ವಕ್ತಾರ ರಣ ದೀಪ್‌ಸಿಂಗ್ ಸುರ್ಜೆವಾಲಾ ತಿಳಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಶುಕ್ರವಾ ನಡೆದ ಛಾತ್ರಸಂಸದ್ (ವಿದ್ಯಾರ್ಥಿ ಸಂಸತ್) ಕಾರ್ಯಕ್ರಮಲ್ಲಿ ಮಾತನಾಡುತ್ತಿದ್ದ ಅವರು ಸಮಾನನಾಗರಿಕ ಸಂಹಿತೆಯನ್ನು ಜನರು ಸ್ವಯಂಪ್ರೇರಿತವಾಗಿ ಸ್ವೀಕರಿಸಿದಲ್ಲಿ, ಅದು ಒಂದು ಮಹಾನ್ ಹೆಜ್ಜೆಯಾಗಲಿದೆಯೆಂದು ತಿಳಿಸಿದರು.

‘‘ಸಮಾನನಾಗರಿಕ ಸಂಹಿತೆಯನ್ನು ನಿಮ್ಮ ಮೇಲೆ ಹೇರಲು ಸಾಧ್ಯವಿಲ್ಲವೆಂಬುದು ವಾಸ್ತವ. ಅದು ಐಚ್ಛಿಕವಾದುದಾಗಿರಬೇಕು ಹಾಗೂ ಅದು ಕಡ್ಡಾಯವಾಗಿರಕೂಡದು. ಅದು ಸ್ವಯಂಪ್ರೇರಿತವಾದುದಾಗಿರಬೇಕು. ಹಾಗಾದಲ್ಲಿ ಅದೊಂದು ಮಹಾನ್ ಹೆಜ್ಜೆಯಾಗಲಿದೆ’’ ಎಂದು ಸುರ್ಜೆವಾಲಾ ತಿಳಿಸಿದರು.

   ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಅದರ ಹಿರಿಯ ನಾಯಕ ರಾಜ್‌ನಾಥ್ ಸಿಂಗ್ ಅವರು ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ಬಿಜೆಪಿ ಬದ್ಧವಾಗಿದೆ ಎಂದು ಹೇಳಿದ್ದರು.

  ದೇಶದಲ್ಲಿನ ಜಾತಿ ಆಧಾರಿತ ಹಿಂಸಾಚಾರಗಳ ಬಗ್ಗೆ ಪ್ರಸ್ತಾವಿಸಿದ ಸುರ್ಜೆವಾಲಾ ವಾಸ್ತವಿಕತೆಯನ್ನು ಮರೆಮಾಲು ಯಾರೂ ಕೂಡಾ ಯತ್ನಿಸಬಾರದು ಎಂದು ಹೇಳಿದರು. ಜಾತಿ ಆಧಾರಿತ ಹಿಂಸಾಚಾರವು ನಮ್ಮ ಸಮಾಜದಲ್ಲಿ ಪ್ರಚಲಿತದಲ್ಲಿರುವ ಅತ್ಯಂತ ಕೆಟ್ಟ ಪಿಡುಗಾಗಿದೆ ಎಂದವರು ಅಭಿಪ್ರಾಯಿಸಿದು.

  ದಲಿತರ ಮೇಲಿನ ಹಲ್ಲೆಯ ಕುರಿತಾದ ಇತ್ತೀಚಿನ ಘಟನೆಗಳು, ಬಡತನ ಹಾಗೂ ಜಾತಿ ಈಗಲೂ ಸಾಮಾಜಿಕವಾಗಿ ನಿರ್ಣಾಯಕ ಪಾತ್ರ ವಹಿಸುತ್ತಿವೆ ಎಂಬುದನ್ನು ತೋರಿಸಿಕೊಟ್ಟಿವೆ ಎಂದವರು ಹೇಳಿದರು.

  ಜಾತಿ ಹಾಗೂ ಸಾಮಾಜಿಕ ವಿಭಜನೆಯು ಇಂದಿನ ಅತ್ಯಂತ ಪ್ರಮುಖ ಸಾಮಾಜಿಕ ಸಮಸ್ಯೆಗಳಲ್ಲೊಂದಾಗಿದ್ದು, ವಿದ್ಯಾರ್ಥಿಗಳು ಈ ಬಗ್ಗೆ ಪರಾಮರ್ಶೆ ನಡೆಸಬೇಕಾಗಿದೆಎಂದು ಎಂದು ಸುರ್ಜೆವಾಲಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News